ಬಲೋದಬಜಾರ್ (ಛತ್ತೀಸ್ಗಢ): ಛತ್ತೀಸ್ಗಢದ ಬಲೋದಬಜಾರ್ ಜಿಲ್ಲೆಯಲ್ಲಿ ಇತ್ತೀಚೆಗೆ 13 ವರ್ಷದ ಬಾಲಕಿಯ ಮೇಲೆ 76 ಹಾಗೂ 47 ವರ್ಷದ ಇಬ್ಬರು ವ್ಯಕ್ತಿಗಳು ಅನೇಕ ಬಾರಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಆರೋಪಿಗಳಾದ ಕುಂಜ್ರಾಮ್ ವರ್ಮಾ (76) ಮತ್ತು ರಮೇಶ್ ವರ್ಮಾ (47) ಅವರನ್ನು ಜುಲೈ 31 ರಂದು ರ್ಯಾಗ್ಪಿಕರ್ಸ್ ಕೆಲಸ ಮಾಡುವ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಬಲೋದಬಜಾರ್ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ (ಎಸ್ಎಚ್ಒ) ಯದುಮಣಿ ಸಿದರ್ ತಿಳಿಸಿದ್ದಾರೆ.
ದೂರಿನ ಪ್ರಕಾರ, ಬಾಲಕಿ ವಾಸಿಸುವ ಅದೇ ಪ್ರದೇಶದಲ್ಲಿ ವಾಸವಿರುವ ಕುಂಜ್ರಾಮ್ ಪ್ರತಿ ಬಾರಿ 10 ರೂ. ನೀಡುವುದಾಗಿ ಭರವಸೆ ನೀಡಿ ತನ್ನ ಮನೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ. ಕುಂಜ್ರಾಮ್ಗೆ ಪರಿಚಯವಿರುವ ರಮೇಶ್ ಕೂಡ ಅದೇ ಮೊತ್ತದ ಹಣದ ಆಮಿಷ ಒಡ್ಡಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶನಿವಾರ ಇಬ್ಬರ ಮನೆಯಿಂದ ಬಾಲಕಿ ಹೊರಗೆ ಬರುತ್ತಿರುವುದನ್ನು ನೆರೆಹೊರೆಯ ಮಹಿಳೆಯೊಬ್ಬರು ಗಮನಿಸಿದ್ದು, ಆಕೆ ತನ್ನ ತಾಯಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿ ತನಗಾದ ಕಷ್ಟವನ್ನು ವಿವರಿಸಿದ ನಂತರ, ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.