ಅಬುಜಾ (ನೈಜೀರಿಯಾ): 85 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪ್ರವಾಹಕ್ಕೆ ಸಿಲುಕಿ ಮುಳುಗಿದ ಪರಿಣಾಮ ಸುಮಾರು 76 ಮಂದಿ ಸಾವನ್ನಪ್ಪಿರುವ ಘಟನೆ ನೈಜೀರಿಯಾದ ಅನಾಂಬ್ರಾ ರಾಜ್ಯದಲ್ಲಿ ನಡೆದಿದ್ದು, ಈ ಬಗ್ಗೆ ಅಲ್ಲಿನ ಅಧ್ಯಕ್ಷ ಮುಹಮ್ಮದು ಬುಹಾರಿ ಭಾನುವಾರ ಮಾಹಿತಿ ನೀಡಿದ್ದಾರೆ.
85 ಜನರೊಂದಿಗೆ ಈ ದೋಣಿ ಶುಕ್ರವಾರ ಹೊರಟಿತ್ತು. ರಾಜ್ಯದ ಒಗ್ಬರು ಪ್ರದೇಶದಲ್ಲಿ ಹೆಚ್ಚುತ್ತಿರುವ ಪ್ರವಾಹಕ್ಕೆ ಸಿಲುಕಿ ದೋಣಿ ಮುಳುಗಿದೆ. ಈ ವೇಳೆ ಒಟ್ಟು 76 ಮಂದಿ ಸಾವನ್ನಪ್ಪಿದ್ದಾರೆ ಎಂದು ನೈಜೀರಿಯಾದ ಪ್ರೆಸಿಡೆನ್ಸಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನೈಜೀರಿಯಾ ಸರ್ಕಾರವು ಉಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ದೋಣಿ ಅಪಘಾತದ ಬಗ್ಗೆ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ವಿಷಾದ ವ್ಯಕ್ತಪಡಿಸಿದ್ದಾರೆ.
ʻಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅಪಘಾತದಲ್ಲಿ ಬಲಿಯಾದವರ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಅಲ್ಲಿನ ರಾಷ್ಟ್ರಪತಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.
BIGG NEWS : ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ನೇಮಕಾತಿ ಪರೀಕ್ಷೆಗೆ ಹಿಂದಿ ಕಡ್ಡಾಯ : ಅಮಿತ್ ಶಾ ಸಮಿತಿ ಶಿಫಾರಸು
BIGG NEWS : `ಬಗರ್ ಹುಕುಂ’ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್