ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಜನನ-ಮರಣ ನೋಂದಣಿ ಪ್ರಮಾಣ ಪತ್ರ ನೀಡುವುದಕ್ಕೆ ಅವಕಾಶ ನೀಡಲಾಗಿತ್ತು. ಗ್ರಾಮ ಪಂಚಾಯ್ತಿಯಲ್ಲೇ ಜನನ-ಮರಣ ಪ್ರಮಾಣ ಪತ್ರಕ್ಕಾಗಿ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬರೋಬ್ಬರಿ 71,388 ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಕಳೆದ ಜುಲೈ ತಿಂಗಳಿನಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜನನ – ಮರಣ ಪ್ರಮಾಣ ಪತ್ರ ವಿತರಣೆ ಸೇವೆ ಆರಂಭಿಸಲಾಗಿತ್ತು.
ಕಳೆದ ನಾಲ್ಕು ತಿಂಗಳುಗಳಲ್ಲಿ ಜನನ – ಮರಣ ನೋಂದಣಿ ಮತ್ತು ವಿಲೇವಾರಿಯಾದ ಅಂಕಿಅಂಶಗಳು:
ಜನನ ಅರ್ಜಿಗಳ ಸ್ವೀಕಾರ – 5,725
ಜನನ ಅರ್ಜಿಗಳ ವಿಲೇವಾರಿ – 4,980… pic.twitter.com/cIfPMGqqU9— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 25, 2024
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ. ಇಲಾಖೆ ವತಿಯಿಂದ ಕಳೆದ ಜುಲೈ ತಿಂಗಳಿನಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಜನನ – ಮರಣ ಪ್ರಮಾಣ ಪತ್ರ ವಿತರಣೆ ಸೇವೆ ಆರಂಭಿಸಲಾಗಿತ್ತು ಎಂದಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಲ್ಲಿ ಜನನ – ಮರಣ ನೋಂದಣಿ ಮತ್ತು ವಿಲೇವಾರಿಯಾದ ಅಂಕಿಅಂಶಗಳು:
ಜನನ ಅರ್ಜಿಗಳ ಸ್ವೀಕಾರ – 5,725
ಜನನ ಅರ್ಜಿಗಳ ವಿಲೇವಾರಿ – 4,980
ಮರಣ ಅರ್ಜಿಗಳ ಸ್ವೀಕಾರ – 71,388
ಮರಣ ಅರ್ಜಿಗಳ ವಿಲೇವಾರಿ – 69,346
ಈ ಸೇವೆ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿರುವುದು ನಮ್ಮ ಇಲಾಖೆ ಮತ್ತು ಸರ್ಕಾರಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಮುಂದಿನ ದಿನಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮತ್ತಷ್ಟು ಸೇವೆಗಳನ್ನು ಪ್ರಾರಂಭ ಮಾಡುವುದಕ್ಕೆ ನಮ್ಮ ಸರ್ಕಾರವು ಸರ್ವ ಸನ್ನದ್ಧವಾಗಿದೆ.
BREAKING : ಶಿವಮೊಗ್ಗದಲ್ಲಿ ಲಾರಿ ಬೈಕ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು ಓರ್ವನಿಗೆ ಗಾಯ!