ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿಜಿಲ್ಲೆಯ ಸಾಗರ ಮತ್ತು ಹೊಸನಗರ ತಹಶೀಲ್ದಾರರು ರಜೆ ಘೋಷಿಸಿದ್ದಾರೆ. ಉಳಿದ ತಾಲ್ಲೂಕುಗಳಿಗೆ ಯಾವುದೇ ರಜೆ ಘೋಷಿಸಲಾಗಿಲ್ಲ.
ಇದು ಶಾಲಾ ಕಾಲೇಜುಗಳು ಅಂಗನವಾಡಿಗಳು ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ತಹಶೀಲ್ದಾರರ ಮೂಲಕ ಮಾಹಿತಿ ನೀಡಿದ್ದಾರೆ.