ಬೆಂಗಳೂರು : ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು 71,000 ಮೌಲ್ಯದ ಸುಮಾರು ಏಳು ಸಾವಿರ ಲ್ಯಾಪ್ ಟಾಪ್ ಖರೀದಿಗೆ ಇ-ಟೆಂಡರ್ ಕರೆದು ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಿ 7 ಸಾವಿರ ಲ್ಯಾಪ್ಟಾಪ್ಗಳನ್ನು ಖರೀದಿಸಿದ್ದು, ಪ್ರತಿ ಲ್ಯಾಪ್ಟಾಪ್ಗೆ 71,093 ಸಾವಿರದಂತೆ ಖರ್ಚು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.
ಪರಿಷತ್ ಸದಸ್ಯ ಸಾಬಣ್ಣ ತಳವಾರ್ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಲಾಡ್ ಅವರು,ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳ ಅನ್ವಯ ಮಂಡಳಿಯಲ್ಲಿ ಲ್ಯಾಪ್ಟಾಪ್ ಖರೀದಿಗಾಗಿ ಇ-ಟೆಂಡರ್ ಕರೆದು ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಿ ಲ್ಯಾಪ್ಟಾಪ್ಗಳನ್ನು ಪೂರೈಕೆ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟ ಉಂಟಾಗಿರುವುದಿಲ್ಲ. ಜೊತೆಗೆ ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕಲಿಗೆ ಭಾಗ್ಯದಡಿ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಪ್ರಾದೇಶಿಕವಾರು 1400 ಲ್ಯಾಪ್ಟಾಪ್ನಂತೆ ಒಟ್ಟು 5 ಪ್ರಾದೇಶಿಕದಲ್ಲಿ 7 ಸಾವಿರ ಲ್ಯಾಪ್ಟಾಪ್ಗಳನ್ನು 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು. ಇ-ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಸಂಸ್ಥೆಯು ಲ್ಯಾಪ್ಟಾಪ್ಗೆ ನಿಗದಿಪಡಿಸಿದ 71,093 ದರಕ್ಕಿಂತ ಕಡಿಮೆ ದರದಲ್ಲಿ ಅಂದರೆ, 71,046ರಂತೆ ಸರಬರಾಜು ಮಾಡಿದೆ ಎಂದು ಹೇಳಿದ್ದಾರೆ.
BREAKING : ಶೀಘ್ರದಲ್ಲಿ ಗುತ್ತಿಗೆ ಆಧಾರದಲ್ಲಿ 337 ವೈದ್ಯರ ನೇಮಕಕ್ಕೆ ನಿರ್ಧಾರ : ದಿನೇಶ್ ಗುಂಡೂರಾವ್
ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ಜೊತೆಗೆ ‘ಆರ್ಥಿಕ ಸಮೀಕ್ಷೆಯೂ’ ನಡೆಯಲಿದೆ: ರಾಹುಲ್ ಗಾಂಧಿ