ಉತ್ತರಕನ್ನಡ : ಸಾರಿಗೆ ಸಂಸ್ಥೆಗೆ ಶಕ್ತಿ ನೀಡಲು ರಾಜ್ಯ ಸರ್ಕಾರ 2 ಸಾವಿರ ಬಸ್‌ಗಳ ಖರೀದಿಗೆ ಬಜೆಟ್‌ನಲ್ಲಿ ಅನುದಾನ ನೀಡಿದೆ. ಮೊದಲ ಹಂತದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 300 ಬಸ್ಸುಗಳನ್ನು ನೀಡಲು ಸೂಚನೆ ನೀಡಿದ್ದೇನೆ. ಎರಡನೆಯ ಹಂತದಲ್ಲಿ ಹೆಚ್ಚಿವರಿಯಾಗಿ 400 ಬಸ್ ಸೇರಿದಂತೆ ಒಟ್ಟು 700 ನೂತನ ಬಸ್ಸುಗಳನ್ನು ನೀಡಲಾಗುತ್ತದೆ ಎಂದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಿನ್ನೆ ಉತ್ತರಕನ್ನಡ ವಿಭಾಗದ ಶಿರಸಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಾರಿಗೆ ಇಲಾಖೆಯ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 300 ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೀಡಲು ಸೂಚನೆ ನೀಡಿದ್ದೇನೆ. ಎರಡನೆಯ ಹಂತದಲ್ಲಿ ಹೆಚ್ಚಿವರಿಯಾಗಿ 400 ಬಸ್ಸುಗಳನ್ನು ನೀಡುತ್ತೇನೆ. ಸಂಸ್ಥೆಯು 6 ಜಿಲ್ಲೆಗಳನ್ನು ಒಳಗೊಂಡಿದ್ದು, ಜಿಲ್ಲೆಗೆ 100 ಬಸ್ಸುಗಳಿಗೆ ಹೆಚ್ಚುವರಿಯಾಗಿ 100 ಬಸ್ಸು ಸೇರಿ ಒಟ್ಟು 700 ಬಸ್ಸು ನೀಡಲಾಗುತ್ತದೆ ಎಂದರು.
ನನ್ನ ಇಲಾಖೆಯಲ್ಲಿ 1 ಲಕ್ಷ ನೌಕರರಿದ್ದಾರೆ. ನಮ್ಮ ನೌಕರರ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿ ವರ್ಷಕ್ಕೆ 850ರೂ. ಪಾವತಿ ಜತೆ ನೌಕರರ ಕುಟುಂಬಕ್ಕೆ ಮತ್ತು ಅವರ ತಂದೆ-ತಾಯಿಗೆ ಸೇರಿ ಉಚಿತ ಆರೋಗ್ಯ ಸೇವೆ ಕಲ್ಪಿಸಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಇದೆ ಸಂದರ್ಭದಲ್ಲಿ ತಿಳಿಸಿದರು.