ಯಾದಗಿರಿ : ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಈ ಒಂದು ಘಟನೆಯಲ್ಲಿ 6 ರಿಂದ 7 ಜನರಿಗೆ ಗಾಯಗಳಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಯನಪಾಳ್ಯ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಯನ ಪಾಳ್ಯದಲ್ಲಿ ನಿನ್ನೆ ರಾತ್ರಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.ಪರಸ್ಪರ ಕಲ್ಲು ತೂರಾಟದ ವೇಳೆ ಆರು ಏಳು ಜನರಿಗೆ ಗಾಯವಾಗಿದೆ. ಪ್ರಕರಣ ಸಂಬಂಧ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಕಾರ್ಯಕರ್ತರನ್ನು ಕರೆದೊಯ್ಯುವಾಗ ಬಿಜೆಪಿ ಅಭ್ಯರ್ಥಿ ರಾಜು ಗೌಡ ಪೊಲೀಸ್ ವಾಹನವನ್ನು ತಡೆದಿದ್ದಾರೆ.
ಪೋಲಿಸ್ ವಾಹನದ ಮುಂದೆ ಈ ವೇಳೆ ರಾಜುಗೌಡ ಮಲಗಿ ಕಾರ್ಯಕರ್ತರನ್ನು ಕರೆದುಕೊಂಡು ಹೋಗದಂತೆ ತಡೆದಿದ್ದಾರೆ. ಪರೀಕ್ಷೆ ಬರೆಯಲು ಹೊರಟವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ವಿರುದ್ಧ ಅವರು ಕಿಡಿ ಕಾರಿದ್ದಾರೆ. ಘಟನೆ ಕುರಿತಂತೆ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.