ಮೊಹಾಲಿ: ಪಂಜಾಬ್ನ ಮೊಹಾಲಿ ಜಿಲ್ಲೆಯ ಬನೂರ್ನ ಏಳು ಯುವಕರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಗೋಬಿಂದ್ ಸಾಗರ್ ಸರೋವರದಲ್ಲಿ ಸೋಮವಾರ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಂಗನಾ ಉಪವಿಭಾಗದ ರಾಯಪುರ ಗ್ರಾಮದ ಗರೀಬ್ ನಾಥ್ ದೇವಸ್ಥಾನದ ಬಳಿ ಇರುವ ಕೆರೆಗೆ 11 ಮಂದಿ ಈಜಲು ಬಂದಿದ್ದರು. ನಾಲ್ವರು ಈಜಿ ದಡ ಸೇರಿದ್ದರೆ, ಉಳಿದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯ (ಬಿಬಿಎಂಬಿ) ಮುಳುಗುಗಾರರು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕರ ಸ್ನಾನ ಮಾಡಲು ಕೆರೆಗೆ ಹೋಗಿದ್ದರು. ಈ ವೇಳೆ ಕೆರೆಯ ಆಳ ತಿಳಿಯದೇ ಒಬ್ಬ ಮೊದಲು ನೀರಿಗೆ ಇಳಿದಿದ್ದು, ಮುಳುಗಲು ಆರಂಭಿಸಿದಾಗ ಆತನನ್ನು ರಕ್ಷಿಸಲು ಆರು ಮಂದಿ ಯುವಕರು ಒಬ್ಬೊಬ್ಬರಂತೆಯೇ ಕೆರೆಗೆ ಹಾರಿದ್ದು, ಇದೀಗ ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಉನಾ ಜಿಲ್ಲಾಧಿಕಾರಿ ರಾಘವ್ ಶರ್ಮಾ ತಿಳಿಸಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ. ಮೃತರನ್ನು ಪವನ್ ಕುಮಾರ್ (35), ರಮಣ್ ಕುಮಾರ್ (19), ಲಖ್ಬೀರ್ ಸಿಂಗ್ (16), ಅರುಣ್ ಕುಮಾರ್ (14), ವಿಶಾಲ್ ಕುಮಾರ್ (18), ಭೂಪಿಂದರ್ ಸಿಂಗ್ (16), ಮತ್ತು ಲಾಭ್ ಸಿಂಗ್ (17) ಎಂದು ಗುರುತಿಸಲಾಗಿದೆ.
ಇವರು ಮೂರು ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದರು. ಕೊನೆಯದಾಗಿ ಬಾಬಾ ಬಾಲಕ್ ನಾಥ್ ಕಡೆಗೆ ತೆರಳಿ ಮನೆಗೆ ತೆರಳುವ ಯೋಜನೆ ರೂಪಿಸಿದ್ದರು. ಆದ್ರೆ, ತಮ್ಮ ಮನೆಗಳಿಗೆ ಹೋಗುವ ಮೊದಲೇ ಸಾವಿನ ಮನೆ ಸೇರಿದ್ದಾರೆ.
BIGG NEWS : ಮಂಕಿಪಾಕ್ಸ್ ಕುರಿತಂತೆ ಇಂದು ಸಿಎಂ ಬೊಮ್ಮಾಯಿ ಮಹತ್ವದ ಸಭೆ
Big news: ಶಸ್ತ್ರಚಿಕಿತ್ಸೆಯಿಲ್ಲದೇ ವ್ಯಕ್ತಿಯ ಹೊಟ್ಟೆಯಿಂದ 50 ಕ್ಕೂ ಹೆಚ್ಚು ನಾಣ್ಯಗಳನ್ನು ಹೊರತೆಗೆದ ವೈದ್ಯರು!