ಚಂಡೀಗಢ: ಹರಿಯಾಣದಲ್ಲಿ ಶುಕ್ರವಾರ ನಡೆದ ಗಣೇಶ ಮೂರ್ತಿಗಳ ನಿಮಜ್ಜನ ವೇಳೆ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಸೋನಿಪತ್ನಲ್ಲಿ ಮೂರು ಸಾವುಗಳು ವರದಿಯಾಗಿದ್ದು, ನಾಲ್ವರು ಮಹೇಂದ್ರಗಢದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸೋನಿಪತ್ನ ಮಿಮಾರ್ಪುರ ಘಾಟ್ನಲ್ಲಿ ತನ್ನ ಮಗ ಮತ್ತು ಸೋದರಳಿಯನೊಂದಿಗೆ ವಿಗ್ರಹ ನಿಮಜ್ಜನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮಹೇಂದ್ರಗಢದಲ್ಲಿ, ಕನಿನಾ-ರೇವಾರಿ ರಸ್ತೆಯಲ್ಲಿರುವ ಜಗಡೋಲಿ ಗ್ರಾಮದ ಬಳಿಯ ಕಾಲುವೆಯಲ್ಲಿ ಗಣೇಶನ ವಿಗ್ರಹವನ್ನು ನಿಮಜ್ಜನ ಮಾಡಲು ಹೋದ ಸುಮಾರು ಒಂಬತ್ತು ಜನರು ಬಲವಾದ ನೀರಿನ ಪ್ರವಾಹಕ್ಕೆ ಕೊಚ್ಚಿಹೋದರು. ತಡರಾತ್ರಿ ಎಂಟು ಜನರನ್ನು ಕಾಲುವೆಯಿಂದ ಹೊರತೆಗೆಯಲಾಯಿತು. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ.
ʻಮಹೇಂದ್ರಗಢ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ನಿಮಜ್ಜನದ ವೇಳೆ ಕಾಲುವೆಯಲ್ಲಿ ಮುಳುಗಿ ಹಲವರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ. ಮೃತರಿಗೆ ನನ್ನ ಸಂತಾಪʼ ಎಂದು ಸಿಎಂ ಎಂಎಲ್ ಖಟ್ಟರ್ ಹೇಳಿದ್ದಾರೆ.
ಜಸ್ಟ್ ಮಿಸ್: ರೈಲಿಗೆ ಬಲಿಯಾಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಅಧಿಕಾರಿ… ವಿಡಿಯೋ ವೈರಲ್
`CET RANK’ : ಮತ್ತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾದ ಕೆಇಎ