ಗುಜರಾತ್: ಸೋಮವಾರ ಗುಜರಾತ್ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಅಲ್ಲಿನ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಹವಾಮಾನ ಇಲಾಖೆಯು ಇಂದು ಮತ್ತು ಮುಂದಿನ ಐದು ದಿನ ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.
ನಿನ್ನೆ ಕಳೆದ 24 ಗಂಟೆಗಳಲ್ಲಿ ಏಳು ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 1 ರಿಂದ ಗುಜರಾತ್ನಲ್ಲಿ ಸಿಡಿಲು, ಮುಳುಗುವಿಕೆ, ಗೋಡೆ ಕುಸಿತ ಮುಂತಾದ ಮಳೆ ಸಂಬಂಧಿತ ಘಟನೆಗಳಿಂದ ಸಾವಿನ ಸಂಖ್ಯೆ 63 ಕ್ಕೆ ಏರಿದೆ. ಇನ್ನೂ, 9,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅಪಾಯದಲ್ಲಿದ್ದ 468 ಜನರನ್ನು ರಕ್ಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.
Rain In Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಕರಾವಳಿ ಜಿಲ್ಲೆಗಳಲ್ಲಿ `ಆರೆಂಜ್ ಅಲರ್ಟ್’ ಘೋಷಣೆ
Big news: ಸೆಪ್ಟೆಂಬರ್ 5ಕ್ಕೆ ಬ್ರಿಟನ್ನ ನೂತನ ಪ್ರಧಾನಿ ಹೆಸರು ಘೋಷಣೆ: ಸ್ಪರ್ಧಿಗಳ ಸಂಖ್ಯೆ 11ಕ್ಕೆ ಏರಿಕೆ