ಕುಲು (ಹಿಮಾಚಲ ಪ್ರದೇಶ): ಕುಲು ಜಿಲ್ಲೆಯ ಬಂಜಾರ್ ಕಣಿವೆಯ ಘಿಯಾಗಿ ಪ್ರದೇಶದಲ್ಲಿ ಭಾನುವಾರ ಬಂಡೆಯಿಂದ ಪ್ರವಾಸಿ ವಾಹನವೊಂದು ಉರುಳಿದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಭಾನುವಾರ ರಾತ್ರಿ 8:30ರ ಸುಮಾರಿಗೆ ಎನ್ಎಚ್ 305ರಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಯ ಪ್ರಕಾ,ರ ವಾಹನದಲ್ಲಿ ಚಾಲಕ ಸೇರಿದಂತೆ 17 ಮಂದಿ ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು, ಗೃಹ ರಕ್ಷಕರು ಮತ್ತು ಸ್ಥಳೀಯ ಆಡಳಿತ ತಂಡಗಳು ಸ್ಥಳಕ್ಕಾಗಮಿಸಿವೆ. ಅವರಲ್ಲಿ ಕೆಲವರು ಸತ್ತಿರುವ ಶಂಕೆಯಿದೆ. ಗಾಯಾಳುಗಳನ್ನು ಆಸ್ಪಪತ್ರೆಗೆ ರವಾನಿಸಲಾಗಿದೆ ಎಂದು ಕುಲು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಅಶುತೋಷ್ ಗರ್ಗ್ ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
BIGG NEWS : ನಾಡಗೀತೆ ಕಾಲಮಿತಿ, ಧಾಟಿ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
BIGG NEWS : ಪಡಿತರ ಚೀಟಿದಾರರೇ ಗಮನಿಸಿ : ಮೊಬೈಲ್ ನಂಬರ್ ಅಪ್ ಡೇಟ್ ಮಾಡದಿದ್ರೆ ಸಿಗಲ್ಲ ರೇಷನ್!