ಬೆಂಗಳೂರು : ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ತಡರಾತ್ರಿ ಕಾಯ್ದೆ ವಾಪಸ್ ಪಡೆದಿದೆ. ಆದೇಶ ಹಿಂಪಡೆದ ಪತ್ರದಲ್ಲಿ ಕನ್ನಡ ಹತ್ತಾರು ತಪ್ಪುಗಳು ಕಂಡುಬಂದಿವೆ.
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಬ್ಯಾನ್ ಆದೇಶ ವಾಪಸ್ ಪಡೆದ ಪತ್ರದಲ್ಲಿ ಕನ್ನಡದ ಕಗ್ಗೊಲೆ ಆಗಿದೆ. ಆದೇಶ ಹಿಂಪಡೆದ ಕುರಿತ ನಾಲ್ಕು ಸಾಲಿನ ಪತ್ರದಲ್ಲಿ ಹಲವು ವ್ಯಾಕರಣದ ತಪ್ಪುಗಳಿವೆ. ರಾಜ್ಯ ಸರ್ಕಾರದ ಆದೇಶದ ಪ್ರತಿಯಲ್ಲಿರುವ ತಪ್ಪುಗಳು ನಡವಳಿಗಳು (ನಡಾವಳಿಗಳು), ಪ್ರಸತ್ತಾವನೆ (ಪ್ರಸ್ತಾವನೆ), ಮೇಲೇ (ಮೇಲೆ) ಬಾಗ-1 (ಭಾಗ-), ಕರ್ನಾಟಾ (ಕರ್ನಾಟಕ) ಆಡಳಿದ (ಆಡಳಿತ) ಎಂಬ ತಪ್ಪುಗಳಿವೆ.
ಸರ್ಕಾರದ ಸುತ್ತೋಲೆಯಲ್ಲೇ ಕಾಗುಣಿತ ದೋಷಗಳು ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ನಿಷೇಧ ವಾಪಸ್ ಆದೇಶ ಹಿಂಪಡೆದ ಪ್ರತಿಯಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಒಂದು ಪುಟ ಸುತ್ತೋಲೆಯಲ್ಲಿ 8 ಅಕ್ಷ ದೋಷಗಳು ಪತ್ತೆಯಾಗಿವೆ. ಹೀಗೆ ಕಾಗುಣಿತದ ತಪ್ಪುಗಳ ಸರಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.