ಬೆಂಗಳೂರು: ಬೆಂಗಳೂರು: ರಾಜ್ಯದ 14 ಲೋಕಸಭಾ (Lok Sabha Elections 2024) ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿತ್ತು, ಈ ನಡುವೆ ತದಾನ ಪ್ರಮಾಣದ ಪರಿಷ್ಕೃತ ವರದಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಅದರಂತೆ ರಾಜ್ಯದಲ್ಲಿ 69.56% ಮತದಾನ ನಡೆದಿದೆ ಅಂತ ಮಾಹಿತಿ ನೀಡಿದೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಉಡುಪಿ-ಚಿಕ್ಕಮಗಳೂರು 77.15%, ಹಾಸನ 77.68%, ದಕ್ಷಿಣ ಕನ್ನಡ 77.56%, ಚಿತ್ರದುರ್ಗ 73.30%, ತುಮಕೂರು 78.05%, ಮಂಡ್ಯ 81.67%, ಮೈಸೂರು 70.62%, ಚಾಮರಾಜನಗರ 76.81% ಮತದಾನ ನಡೆದಿದೆ.\ಬೆಂಗಳೂರು ಗ್ರಾಮಾಂತರ 68.30%, ಬೆಂಗಳೂರು ಉತ್ತರ 54.45%, ಬೆಂಗಳೂರು ಕೇಂದ್ರ 54.06%, ಬೆಂಗಳೂರು ದಕ್ಷಿಣ 53.17%, ಚಿಕ್ಕಬಳ್ಳಾಪುರ 77.00%, ಕೋಲಾರ 78.27% ಮತ ಚಲಾವಣೆಯಾಗಿದೆ
ಏಪ್ರಿಲ್ 26, 2024ರಂದು ನಡೆದ ಕರ್ನಾಟಕ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನ ಹೀಗಿದೆ. ಮತಹಬ್ಬದಲ್ಲಿ ಭಾಗವಹಿಸಿದ ಎಲ್ಲಾ ಜವಾಬ್ದಾರಿಯುತ ಮತದಾರರಿಗೂ ಅಭಿನಂದನೆಗಳು.@ECISVEEP@SpokespersonECI#Elections2024 #AllToPoll #LokaSabhaElection2024 #YourVoteYourVoice #EveryVoteCounts #ceokarnataka pic.twitter.com/CWsv11pzgR
— Chief Electoral Officer, Karnataka (@ceo_karnataka) April 27, 2024