ಬೆಂಗಳೂರು: ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಿತು. ಸಂಜೆ 5 ಗಂಟೆಯವರೆಗೆ ಶೇ.66.05ರಷ್ಟು ಮತದಾನ ನಡೆದಿದ್ದರೇ, ಇದೀಗ ಸಿಕ್ಕಿರುವಂತ ಮಾಹಿತಿಯಂತೆ ಶೇ.66.74ರಷ್ಟು ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಕ್ಷಣ ಕ್ಷಣದ ಅಪ್ ಡೇಟ್ ಅನ್ನು Voter Tournout ಆಪ್ ನಲ್ಲಿ ನೀಡಲಾಗುತ್ತಿದೆ. ಈಗ ಸಿಕ್ಕಿರುವಂತ ಮಾಹಿತಿಯಂತೆ ರಾಜ್ಯದಲ್ಲಿ ಇಂದು ನಡೆದಂತ 2ನೇ ಹಂತದ ಲೋಕಸಭಾ ಕ್ಷೇತ್ರಗಳಲ್ಲಿ ಶೇ.66.74ರಷ್ಟು ಮತದಾನ ನಡೆದಿದೆ.
ಹೀಗಿದೆ 14 ಲೋಕಸಭಾ ಕ್ಷೇತ್ರಗಳ ಜಿಲ್ಲಾವಾರು ಶೇಕಡವಾರು ಪ್ರಮಾಣ
- ಬಾಗಲಕೋಟೆ – ಶೇ.66.17
- ಬೆಳಗಾವಿ – ಶೇ.69.23
- ಬಳ್ಳಾರಿ – ಶೇ.69.13
- ಬೀದರ್ – ಶೇ.60.17
- ವಿಜಯಪುರ- ಶೇ.61.49
- ಚಿಕ್ಕೋಡಿ- ಶೇ.72.75
- ದಾವಣಗೆರೆ – ಶೇ.71.36
- ಧಾರವಾಡ- ಶೇ.67.91
- ಗುಲ್ಬರ್ಗ- ಶೇ.57.20
- ಹಾವೇರಿ – ಶೇ.72.59
- ಕೊಪ್ಪಳ- ಶೇ.66.17
- ರಾಯಚೂರು- ಶೇ.60.06
- ಶಿವಮೊಗ್ಗ- ಶೇ.72.47
- ಉತ್ತರ ಕನ್ನಡ – ಶೇ.70.13
ರಾಜ್ಯದ ‘108 ಸಿಬ್ಬಂದಿ ಮುಷ್ಕರ’ ವಾಪಾಸ್: ಎಂದಿನಂತೆ ಕೆಲಸಕ್ಕೆ ಹಾಜರ್
ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್