ಬೆಂಗಳೂರು : ರಾಜ್ಯದಲ್ಲಿ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಗೆ ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ ಹನಿಟ್ರ್ಯಾಪ್ ಬದಲಾಗಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನುವ ಆಡಿಯೋ ಇದೀಗ ಸೋರಿಕೆಯಾಗಿದೆ. ಹತ್ಯೆ ಸುಪಾರಿಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ರಾಜೇಂದ್ರ ಅವರ ಭೇಟಿಗೆ ಯತ್ನಿಸಿದ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ, ರಾಜೇಂದ್ರ ಅವರ ಸುಪಾರಿಗೆ ಸಂಬಂಧಿಸಿದಂತೆ 18 ನಿಮಿಷಗಳ ಟೆಲಿಫೋನ್ ಸಂಭಾಷಣೆಯೊಂದು ಲೀಕ್ ಆಗಿತ್ತು. ಅತ್ತ, ರಾಜೇಂದ್ರ ಅವರು ತಮಗೆ ಸಿಕ್ಕಿರುವ ಕೆಲವು ಸಾಕ್ಷ್ಯಾಧಾರಗಳನ್ನು ಸೇರಿಸಿಕೊಂಡು ತುಮಕೂರು ಎಸ್ಪಿಯವರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ, ತನಿಖೆ ನಡೆಸಿರುವ ಪೊಲೀಸರು ಒಬ್ಬ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.