ಘಾನಾ: ಪಶ್ಚಿಮ ಆಫ್ರಿಕಾದ ಘಾನಾದಲ್ಲಿ 63 ವರ್ಷದ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯನ್ನು ಮದುವೆಯಾಗಿದ್ದು, 6ನೇ ವಯಸ್ಸಿನಲ್ಲಿ ಪತ್ನಿಯಾಗಿ ಆಯ್ಕೆಯಾಗಿದ್ದರು ಎನ್ನಲಾಗಿದೆ.
ಪಾದ್ರಿ ನುಮೊ ಬೊರ್ಕೆಟೆ ಲಾವೆ ತ್ಸುರು XXXIII ಶನಿವಾರ ಕ್ರೋವರ್ ನ ನುಂಗುವಾದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಮಗುವನ್ನು ವಿವಾಹವಾದರಂತೆ.
ಸ್ಥಳೀಯ ಸುದ್ದಿ ಚಾನೆಲ್ ಅಬ್ಲೇಡ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರ ಮದುವೆಯ ಘಟನೆಯ ತುಣುಕುಗಳು, ಮದುವೆಗೆ ಸಾಕ್ಷಿಯಾಗಲು ಡಜನ್ಗಟ್ಟಲೆ ಸಮುದಾಯದ ಸದಸ್ಯರು ಜಮಾಯಿಸಿರುವುದನ್ನು ಕಾಣಬಹುದಾಗಿದೆ. ಇದು ಹಲವಾರು ಘಾನಾ ಜನರ ಆಕ್ರೋಶಕ್ಕೆ ಕಾರಣವಾಯಿತು. ಸಮಾರಂಭದಲ್ಲಿ, ಸ್ಥಳೀಯ ‘ಗಾ’ ಭಾಷೆಯಲ್ಲಿ ಮಾತನಾಡಿದ ಮಹಿಳೆಯರು ತಮ್ಮ ಹೊಸ ಪತಿಗಾಗಿ ತಮಾಷೆಯಾಗಿ ಉಡುಪು ಧರಿಸುವಂತೆ ಹುಡುಗಿಗೆ ಸೂಚನೆ ನೀಡಿದರು ಎಂದು ಡೈಲಿ ಮೇಲ್ ತನ್ನ ವರದಿಯಲ್ಲಿ ತಿಳಿಸಿದೆ.