ಬೆಂಗಳೂರು: ಸಫಾಯಿ ಕರ್ಮಚಾರಿಗಳಿಗೆ ಸಿಹಿ ಸುದ್ದಿಯಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತದೆ ಎಂದು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಮೇರಿಕಾದಲ್ಲಿ ಕಸ ಗುಡಿಸೋದಕ್ಕೆ ಬರುವರು ಕಾರಿನಲ್ಲಿ ಬರುತ್ತಾರೆ. ಇನ್ಮುಂದೆ ನಮ್ಮಲ್ಲೂ ಕಸ ಗುಡಿಸುವವರು ಸ್ಕೂಟರ್ ನಲ್ಲಿ ಬರಲಿದ್ದಾರೆ. ಈಗ ಸ್ಕೂಟರ್ ಹತ್ತುವವರು ನಾಳೆ ಕಾರನ್ನು ಹತ್ತುತ್ತಾರೆ. ಬಡವರು, ದುಡಿಯುವವರ ಪರ ಇರುವ ಸರ್ಕಾರ ನಮ್ಮದು.
ಈ ನಿಟ್ಟಿನಲ್ಲಿ 600 ಸಫಾಯಿ ಕರ್ಮಚಾರಿಗಳಿಗೆ ಸ್ಕೂಟರ್ ವಿತರಿಸಲಾಗುವುದು ಎಂದು ಘೋಷಿಸಿದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಾಬು ಜಗಜೀವನರಾಮ್ ಯೋಜನೆಯಡಿ ನೀಡಲಾಗುವುದು. ಒಟ್ಟು 25 ಸಾವಿರ ಸ್ಕೂಟರ್ ವಿತರಣೆಗೆ ನಿರ್ಧರಿಸಲಾಗಿದ್ದು, ಯುವಕರು, ಮಹಿಳೆಯರು ಸ್ಕೂಟರ್ ಬಳಸಬಹುದಾಗಿದೆ ಎಂದು ಹೇಳಿದರು.
ಸಫಾಯಿ ಕರ್ಮಚಾರಿಗಳಿಗೆ ಸಿಹಿ ಸುದ್ದಿ : ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತೆ: ಸಿಎಂ ಬ್ಬೊ ಮ್ಮಾಯಿ ಘೋಷಣೆ