Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗುರುವಾರ ರಾಯರ ಅನುಗ್ರಹ ಪಡೆಯಲು ಈ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ತಪ್ಪದೇ ಪಠಿಸಿ

13/03/2026 5:46 PM

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

13/03/2026 5:43 PM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

13/03/2026 5:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ.!
KARNATAKA

ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ.!

By kannadanewsnow5728/12/2025 9:07 AM

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮಾಲೀಕರು ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ತಪ್ಪಿದಲ್ಲಿ ಉದ್ದಿಮೆಗಳ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರ ಪರವಾನಿಗೆಗಳನ್ನು ರದ್ದುಪಡಿಸಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮುದ್ರಣದಾರರು ಜಾಹೀರಾತು ಮುದ್ರಿಸುವ ಸಮಯದಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಲು ಸರ್ಕಾರದಿಂದ ಕಾಯ್ದೆ ಜಾರಿಯಾಗಿದೆ.

ಹಾಗಾಗಿ ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಮಾಲೀಕರು ಪ್ರಧಾನವಾಗಿ ಶೇಕಡ 60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರತಕ್ಕದ್ದು.

ನಾಮಫಲಕದಲ್ಲಿ ಕನ್ನಡ ಭಾಷೆ ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗುವಂತೆ ಹಾಗೂ ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ಭಾಷೆ ನಾಮಫಲಕ ಮೇಲ್ಭಾಗದಲ್ಲಿರುವಂತೆ ಹಾಗೂ ದೊಡ್ಡದಾಗಿರುವಂತೆ ಅಳವಡಿಸಬೇಕು.

ಜನವರಿ 05 ರೊಳಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರು ನಾಮಫಲಕಗಳು ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಪ್ರಧಾನವಾಗಿ ಕನ್ನಡ ಬಳಸಬೇಕು.

ತಪ್ಪಿದಲ್ಲಿ ಅಂತಹ ನಾಮಫಲಕ, ಮುದ್ರಣ ಜಾಹೀರಾತುಗಳನ್ನು ತೆರವುಗೊಳಿಸಿ ನಿಯಮಾನುಸಾರ ದಂಡವಿಧಿಸಿ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

60% use of Kannada language in nameplates and advertisements is mandatory!
Share. Facebook Twitter LinkedIn WhatsApp Email

Related Posts

ಗುರುವಾರ ರಾಯರ ಅನುಗ್ರಹ ಪಡೆಯಲು ಈ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ತಪ್ಪದೇ ಪಠಿಸಿ

13/03/2026 5:46 PM3 Mins Read

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

13/03/2026 5:43 PM2 Mins Read

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

13/03/2026 5:42 PM4 Mins Read
Recent News

ಗುರುವಾರ ರಾಯರ ಅನುಗ್ರಹ ಪಡೆಯಲು ಈ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ತಪ್ಪದೇ ಪಠಿಸಿ

13/03/2026 5:46 PM

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

13/03/2026 5:43 PM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

13/03/2026 5:42 PM

BREAKING : ‘ಆತಂಕ ಬೇಡ, 24 ಗಂಟೆಗಳಲ್ಲೇ LPG ಪೂರೈಕೆ’ ; ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಮಾಹಿತಿ!

13/03/2026 5:36 PM
State News
KARNATAKA

ಗುರುವಾರ ರಾಯರ ಅನುಗ್ರಹ ಪಡೆಯಲು ಈ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ತಪ್ಪದೇ ಪಠಿಸಿ

By kannadanewsnow0913/03/2026 5:46 PM KARNATAKA 3 Mins Read

ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರವನ್ನು ಶ್ರೀ ಗುರುಜಗನ್ನಾಥ ದಾಸರು ಸಾಮಾನ್ಯ ಜನರ ಮನೋವಾಂಚ್ಯಾರ್ಥಗಳೆಲ್ಲಾ ಪೂರ್ಣಗೊಳ್ಳಲಿ ಹಾಗೂ ಪ್ರತ್ಯೇಕವಾಗಿ ಸ್ತ್ರೀಯರಿಗೆ ಸಕಲ…

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ನೈರುತ್ಯ ರೈಲ್ವೆಯಿಂದ ಈ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ

13/03/2026 5:43 PM

‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ

13/03/2026 5:42 PM

ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ‘115 ಹೊಸ KSRTC ಬಸ್ಸು’ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

13/03/2026 5:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.