ಹುಬ್ಬಳ್ಳಿ : ರಾಜ್ಯದಲ್ಲಿಂದು ಮಾಕ್ ಡ್ರಿಲ್ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ( Health Minister Sudhakar ) ಹೇಳಿದರು.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಕೋವಿಡ್ ಆತಂಕದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ವೀಕ್ಷಿಸಲು ಸಚಿವ ಸುಧಾಕರ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.
ನಂತರ ಮಾತನಾಡಿದ ಸಚಿವರು ಕಿಮ್ಸ್ ನಲ್ಲಿ ದೊಡ್ಡ ವೈದ್ಯ ಸಮೂಹವಿದೆ, ಕೋವಿಡ್ ಗಾಗಿ ಕಿಮ್ಸ್ ಗೆ 60 ಸಾವಿರ ಹಾಸಿಗೆ ಮೀಸಲು ಇಡಲಾಗಿದೆ. 200 ವೆಂಟಿಲೇಟರ್ ಇದೆ , 40 ಕೆ ಎಲ್ ನ ಆಕ್ಸಿಜನ್ ಪ್ಲಾಂಟ್ ಅಳವಡಿಕೆ ಮಾಡಲಾಗಿದೆ. ಕಿಮ್ಸ್ ವ್ಯವಸ್ಥೆ ನನಗೆ ಸಮಾಧಾನ ತಂದಿದೆ ಎಂದು ಸಚಿವ ಸುಧಾಕರ್ ಹೇಳಿದರು.
BIGG NEWS : ಸುರತ್ಕಲ್ನಲ್ಲಿ ಜಲೀಲ್ ಹತ್ಯೆ ಪ್ರಕರಣ : ಮತ್ತೊರ್ವ ಪ್ರಮುಖ ಆರೋಪಿ ಅರೆಸ್ಟ್ | Jalil murder case