ಬೆಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋವಿಡ್ ಸಭೆ ಇಂದು ನಡೆದಿದ್ದು, ಸಭೆ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿ ಅವರು ನಾವು ಸಭೆಯಲ್ಲಿ ಪಾಲಿಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದ್ದೇವೆ. ರಾಜ್ಯ ಆರೋಗ್ಯ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟ ಮಾಡಿದ್ದು, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ಬೂಸ್ಟರ್ ಡೋಸ್ ಪಡೆಯಲು ಜನರು ಮುಂದೆ ಬರಬೇಕು. ಬೆಂಗಳೂರಲ್ಲಿ 60% ಮಂದಿ ಬೂಸ್ಟರ್ ಡೋಸ್ ಪಡೆಯೋದು ಬಾಕಿ ಇದೆ . 1 ಲಕ್ಷ ಬೂಸ್ಟರ್ ಡೋಸ್ ನೀಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.
ಈಗಾಗಲೇ ಫನಾ ಸಂಘಟನೆ ಜೊತೆ ಮಾತನಾಡಿದ್ದೇವೆ. ನಗರದ 30 ಬೆಡ್ಗಳಿರುವ 418 ಖಾಸಗಿ ಆಸ್ಪತ್ರೆ ಪಟ್ಟಿ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೂ ಬೆಡ್ ಸಿದ್ದಪಡಿಸಲು ಆದೇಶ ನೀಡಿದ್ದೇವೆ.ನಾಳೆಯಿಂದ ಆಕ್ಸಿಜನ್ ಪ್ರಿಕಾಷನ್ ಬಗ್ಗೆ ಮಾಕ್ ಡ್ರಿಲ್ ಮಾಡಿ ಆಕ್ಸಿಜನ್ ರೆಡಿ ಇಟ್ಟುಕೊಳ್ಳುತ್ತೇವೆ. TAC ಕೊಟ್ಟ ಸಲಹೆ ಗಂಭೀರವಾಗಿ ತೆಗೆದುಕೊಂಡು ಆ ಪ್ರಕಾರ ಕೆಲಸ ಆರಂಭಿಸುತ್ತೇವೆ ಎಂದಿದ್ದಾರೆ