ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಸೀಸನ್-9 ರ ಸ್ಪರ್ಧಿ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಅವರು ಬಿಗ್ ಬಾಸ್ ಕಡೆಯಿಂದ 50 ಲಕ್ಷ ಹಾಗೂ ಸ್ಪಾನ್ಸರ್ ಕಡೆಯಿಂದ 10 ಲಕ್ಷ ಪಡೆಯಲಿದ್ದು ಒಟ್ಟು 60 ಲಕ್ಷ ಪಡೆಯಲಿದ್ದಾರೆ.
ಬಿಗ್ ಬಾಸ್ ಟ್ರೋಫಿ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ಹಣವನ್ನು ಬಿಗ್ ಬಾಸ್ ಘೋಷಿಸಿದೆ. ಇಷ್ಟೊಂದು ಹಣ ರೂಪೇಶ್ ಶೆಟ್ಟಿ ಪಾಲಾಗುತ್ತಿರುವುದು ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ವೇದಿಕೆಯಲ್ಲಿಯೇ ನಿರೂಪಕ, ನಟ ಕಿಚ್ಚ ಸುದೀಪ್ ಬಹುಮಾನ ಘೋಷಿಸಿದ್ದಾರೆ. ಆದರೆ ನಿಜ ಅಂದರೆ ಇಷ್ಟೊಂದು ಹಣ ರೂಪೇಶ್ ಶೆಟ್ಟಿ ಕೈ ಸೇರುವುದಿಲ್ಲ. ಹೌದು, 60 ಲಕ್ಷ ರೂನಲ್ಲಿ ಶೇ 30 ರಷ್ಟು ತೆರಿಗೆ ಕಡಿತವಾಗಿ ಅವರ ಕೈಗೆ ಅಂದಾಜು 42 ಲಕ್ಷ ರೂ ಹಣ ಬರಬಹುದು ಎನ್ನಲಾಗಿದೆ.
ಇನ್ನೂ, ವಿನ್ನರ್ ರೂಪೇಶ್ ಶೆಟ್ಟಿಗೆ 60 ಲಕ್ಷ, ರನ್ನರ್ ಅಪ್ ಆಗಿರುವ ರಾಕೇಶ್ ಅಡಿಗ 12 ಲಕ್ಷಕ್ಕೆ ತೃಪ್ತಿ ಪಟ್ಟರೆ, ಮೂರನೇ ಸ್ಥಾನ ಪಡೆದಿರುವ ದೀಪಿಕಾ ದಾಸ್ ಐದು ಲಕ್ಷ, ರೂಪೇಶ್ ರಾಜಣ್ಣ ಮೂರು ಲಕ್ಷ ಪಡೆದುಕೊಳ್ಳಲಿದ್ದಾರೆ.
ಇನ್ನೂ, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಜೋಡಿ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದಿತ್ತು. ಕಿರುತೆರೆ ಪ್ರೇಕ್ಷಕರ ಮೋಡಿ ಮಾಡಿದ್ದ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮುಗಿದಿದೆ. ಸದ್ಯದಲ್ಲೇ ಸೀಸನ್ 10 ಕೂಡ ಬರಲಿದೆ ಎನ್ನಲಾಗಿದೆ.
NASA ALEART: ಕ್ಷುದ್ರಗ್ರಹವು ಹೈಪರ್ಸಾನಿಕ್ ಕ್ಷಿಪಣಿಗಿಂತ ವೇಗವಾಗಿ ಭೂಮಿಯ ಕಡೆಗೆ ಚಲಿಸುತ್ತಿದೆ: ನಾಸಾ ಎಚ್ಚರಿಕೆ
ಕಾಲೇಜಿನಲ್ಲಿ ಹಾಡಹಗಲೇ ಕೊಲೆ ಪ್ರಕರಣ: ಪುಂಡರ ಮಟ್ಟ ಹಾಕಲು ರಾಜನುಕುಂಟೆ ಪೋಲಿಸರ ಕರ್ತವ್ಯ ವೈಫಲ್ಯ