ಬೆಂಗಳೂರು: ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಈ ನಿಯಮದಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ. ಅದು ಸಾಧ್ಯವೂ ಇಲ್ಲ ಎಂಬುದಾಗಿ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲಾ ದಾಖಲಾತಿಗೆ 6 ವರ್ಷ ಮಕ್ಕಳ ವಯಸ್ಸು ಆಗಿರಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶ ಮಾರ್ಪಾಡಿಗೆ ಕೋರ್ಟ್ ಗೆ ಹೋಗಲಾಗಿತ್ತು. ಆದರೇ ಕೋರ್ಟ್ ಅರ್ಜಿ ವಜಾಗೊಳಿಸಿದೆ. ನಾವು ಕೋರ್ಟ್ ಆದೇಶವನ್ನು ಪಾಲನೆ ಮಾಡಲಿದ್ದೇವೆ ಎಂದರು.
ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಒಂದು, ಎರಡು ತಿಂಗಳು ಕಡಿಮೆ ಇದ್ದ ಮಕ್ಕಳಿಗೆ ಶಾಲಾ ದಾಖಲಾತಿಗೆ ಅವಕಾಶ ನೀಡಿದ್ರೇ ಮತ್ತೊಬ್ಬರು ಕೇಳುತ್ತಾರೆ. ಎಷ್ಟೋ ಪೋಷಕರು 6 ವರ್ಷಕ್ಕೆ 7 ದಿನ ಕಡಿಮೆ ಇದೆ ಅಂತಾನೂ ಹೇಳಿದ್ದಾರೆ. ಆದರೇ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಒಂದು, ಎರಡು ತಿಂಗಳು ಕಡಿಮೆ ಇದೆ ಎನ್ನುವ ಕಾರಣಕ್ಕೆ ದಾಖಲಾತಿಗೆ ಅವಕಾಶ ನೀಡುವುದಿಲ್ಲ ಎಂದರು.
ಟ್ರಂಪ್ ಜೊತೆ ಮಾತಿನ ಚಕಮಕಿ:’ಜೆಲೆನ್ಸ್ಕಿ’ಗೆ ಯುರೋಪಿಯನ್ ಮಿತ್ರರಾಷ್ಟ್ರಗಳು, ಕೆನಡಾ ಬೆಂಬಲ | Trump-Zelensky