ತಮಿಳುನಾಡು : ಮರಳು ತುಂಬಿದ ಟ್ರಕ್ ಓಮಿನಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಮೃತಪಟ್ಟಿರುವ ಘಟನೆ ತಮಿಳುನಾಡಿದ ಸೇಲಂನಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೇಲಂ ಜಿಲ್ಲೆಯ ಪೆಥಾನೈಕೆನ್ಪಾಳ್ಯಂನಿಂದ ಐವರ ಕುಟುಂಬವೊಂದು ಓಮ್ನಿ ಬಸ್ನಲ್ಲಿ ಹತ್ತುತ್ತಿತ್ತು. ಈ ಕುಟುಂಬ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳುತ್ತಿದ್ದರು.
BIG NEWS: ಕೇರಳ ರೈಲು ಯೋಜನೆ ಪ್ರಸ್ತಾವನೆ ತಿರಸ್ಕರಿಸಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ
ಬಸ್ ಕ್ಲೀನರ್ ಜನರು ತಮ್ಮ ಲಗೇಜುಗಳನ್ನು ಇಡಲು ಸಹಾಯ ಮಾಡುತ್ತಿದ್ದಾಗ, ಟ್ರಕ್ ಓಮ್ನಿಬಸ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಐದು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ತಿರುನಾವುಕ್ಕರಸು, ಅವರ ಪುತ್ರ ರವಿಕುಮಾರ್, ಅವರ ಸಂಬಂಧಿಕರಾದ ಸೆಂಥಿಲ್ವೇಲನ್ ಮತ್ತು ಸುಬ್ರಮಣಿ ಮತ್ತು ಬಸ್ ಕ್ಲೀನರ್ ದೀಪನ್ ಎಂದು ಗುರುತಿಸಲಾಗಿದೆ. ತಿರುನಾವುಕ್ಕರಸು ಅವರ ಪತ್ನಿ ವಿಜಯಾ ಅವರನ್ನು ಸೇಲಂ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಏತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇತ್ತ ಟ್ರಕ್ ಚಾಲಕ ಅಪಘಾತ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
SHOCKING : 200 ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಅನ್ನ ಬೇಯಿಸಿ ಬಡಿಸಿದ ಸಹರಾನ್ಪುರ ಸಿಬ್ಬಂದಿ ; ಫೋಟೋ ವೈರಲ್