ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ದೇವಸ್ಥಾನದ ಪೂಜೆ ವಿಚಾರಕ್ಕಾಗಿ ಮಾರಾಮಾರಿ ನಡೆದಿದೆ. ಕೋಲು, ದೊಣ್ಣೆಯಿಂದ ಬಡಿದಾಟವಾಗಿದ್ದು ಈ ಗಲಾಟೆಯಲ್ಲಿ 6 ಜನರು ಗಾಯಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚಿಪುರ ವ್ಯಾಪ್ತಿಯ ಅಜ್ಜಯ್ಯನಹಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಅಜ್ಜಯ್ಯನಹಟ್ಟಿಯಲ್ಲಿರುವಂತ ವೀರ ಮಾರಣ್ಣ ದೇವಾಲಯದ ಪೂಜೆ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.
ಅಜ್ಜಯ್ಯನಹಟ್ಟಿಯ ಎರಡು ಗುಂಪುಗಳ ನಡುವೆ ಕೋಲು, ದೊಣ್ಣೆಯಿಂದ ಬಡಿದಾಡಿಕೊಂಡ ಪರಿಣಾಮ 6 ಜನರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶ್ರೀರಾಂಪುರ, ಹೊಸದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದೀಗ ಅಜ್ಜಯ್ಯನಹಟ್ಟಿಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಬ್ಬ ಆಪ್ತನ ವಿರುದ್ಧ ‘FIR’ ದಾಖಲು
BREAKING : ರಾಮನಗರದಲ್ಲಿ ಭೀಕರ ಕೊಲೆ : ‘ನ್ಯೂ ಇಯರ್’ ಪಾರ್ಟಿ ವೇಳೆ ವ್ಯಕ್ತಿಯನ್ನು ಕೊಂದು ಬಾವಿಗೆ ಎಸೆದ ದುರುಳರು!