ಬೆಂಗಳೂರು : ರಾಜ್ಯದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್ ನಗರಗಳನ್ನ ಸ್ಥಾಪನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು ಅರಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ 2022 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್ ನಗರಗಳನ್ನ ಸ್ಥಾಪನೆ ಮಾಡಲಾಗುತ್ತದೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಮಧ್ಯ ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನ ಬಳಿ ಈ ನಗರಗಳ ಸ್ಥಾಪನೆ ಆಗಲಿದ್ದು, ಒಂದೊಂದು ನಗರಕ್ಕೆ ಒಂದೊಂದು ಉದ್ದೇಶವಿರಲಿದೆ ಎಂದರು.
ಬೆಂಗಳೂರಿನ ಬಳಿಯ ನಗರವು ಜ್ಞಾನ, ವಿಜ್ಞಾನ ತಂತ್ರಜ್ಞಾನ ನಗರವಾಗಲಿದೆ. ಬೆಂಗಳೂರಿನ ವಿಮಾನ ನಿಲ್ದಾನದ ಹತ್ತಿರ ಸ್ಥಾಪನೆಯಾಗಲಿದೆ. ಸದ್ಯದಲ್ಲೇ ಈ ನಗರವನ್ನು ಘೋಷಣೆ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
‘ಟಿಕೆಟ್ ನೀಡದಿದ್ದರೂ, ಕಾರ್ಯಕರ್ತನಾಗಿ ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ’ : ಮಾಜಿ ಸಚಿವ K.S ಈಶ್ವರಪ್ಪ