ಉತ್ತರ ಪ್ರದೇಶ: ಹತ್ರಾಸ್ ಜಿಲ್ಲೆಯಲ್ಲಿ ಹತ್ರಾಸ್ ಆಗ್ರಾ ರಸ್ತೆಯ ಬದರ್ ಗ್ರಾಮದ ಬಳಿ ವೇಗವಾಗಿ ಬಂದ ಟ್ರಕ್ ಕನ್ವರ್ ಯಾತ್ರಿಗಳ ಗುಂಪಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಕನ್ವರ್ ಭಕ್ತರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕನ್ವರ್ ಯಾತ್ರಿಗಳು ಮಧ್ಯಪ್ರದೇಶದ ಗ್ವಾಲಿಯರ್ ಗೆ ಸೇರಿದವರು ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ 93ರ ಹತ್ರಾಸ್ನ ಸದಾಬಾದ್ ಪಿಎಸ್ನಲ್ಲಿ ಶನಿವಾರ ತಡರಾತ್ರಿ 2.15ರ ಸುಮಾರಿಗೆ ಈ ಘಟನೆ ನಡೆದಿದೆ.ಸದ್ಯ ಕನ್ವರ್ ಭಕ್ತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡವರನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.ಕನ್ವರ್ ಯಾತ್ರಿಗಳ ಗುಂಪು ಹರಿದ್ವಾರದಿಂದ ಗ್ವಾಲಿಯರ್ ಗೆ ಹಿಂದಿರುಗುತ್ತಿತ್ತು.
ಹತ್ರಾಸ್ನ ಸದಾಬಾದ್ ಪಿಎಸ್ನಲ್ಲಿ ಇಂದು ಮುಂಜಾನೆ 2.15 ರ ಸುಮಾರಿಗೆ ಏಳು ಕನ್ವರ್ ಭಕ್ತರನ್ನು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಗ್ರಾ ವಲಯದ ಎಡಿಜಿ ರಾಜೀವ್ ಕೃಷ್ಣ ತಿಳಿಸಿದ್ದಾರೆ. ಅವರು ಹರಿದ್ವಾರದಿಂದ ಗ್ವಾಲಿಯರ್ ಗೆ ತಮ್ಮ ಕನ್ವರ್ ಗಳೊಂದಿಗೆ ತೆರಳುತ್ತಿದ್ದರು.
UP | 5 dead after Kanwar devotees from MP's Gwalior were mowed down by a truck in Hathras district during early hours, today pic.twitter.com/8UZjFzZMJM
— ANI UP/Uttarakhand (@ANINewsUP) July 23, 2022