ಜಲಾಲಾಬಾದ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಇಂದು ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಕುನಾರ್ನ ನೂರ್ಗುಲ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ” ಎಂದು ಕುನಾರ್ ಪ್ರಾಂತ್ಯದ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಂಗರ್ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ಬಳಿ ಬೆಳಗಿನ ಜಾವ 2:27 (ಅಫ್ಘಾನಿಸ್ತಾನ ಸಮಯ)ರಲ್ಲಿ ಮತ್ತು 10 ಕಿಲೋಮೀಟರ್ ಆಳದಲ್ಲಿ Bಊಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ.
ವರದಿಯ ಪ್ರಕಾರ, ಇನ್ನೂ ಸಾವು-ನೋವುಗಳು ಹೆಚ್ಚಾಗಬಹುದು ಎನ್ನಲಾಗಿದೆ.
BIGG BREAKING NEWS: ಬೆಂಗಳೂರಿನಲ್ಲಿ ́ರಣಚಂಡಿʼ ಮಳೆಗೆ ಮೊದಲ ಬಲಿ; ʼವಿದ್ಯುತ್ ಸ್ಪರ್ಶಿಸಿʼ ವ್ಯಕ್ತಿ ಸಾವು
BREAKING NEWS: ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ ಪ್ರಧಾನಿ ʻಶೇಖ್ ಹಸೀನಾʼ| Sheikh Hasina arrives in India