ಇಸ್ತಾಂಬುಲ್ : ಟರ್ಕಿಯ ಇಸ್ತಾಂಬುಲ್ನಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ. ಕೇಂದ್ರ ಇಸ್ತಾಂಬುಲ್ನ ತಕ್ಸಿಮ್ ಪ್ರದೇಶದಲ್ಲಿ ಜನನಿಬಿಡ ಪಾದಚಾರಿ ರಸ್ತೆಯಲ್ಲಿ ಸ್ಫೋಟ ಸಂಭಸಿತ್ತು.
Job Alert ; ನೀವು ಹತ್ತನೇ, ಪಿಯುಸಿ ಪಾಸಾಗಿದ್ದೀರಾ.? ಈ ಅಂಚೆ ಉದ್ಯೋಗ ನಿಮಗಾಗಿ.!
ಈ ಕುರಿತಂತೆ ಇಸ್ತಾಂಬುಲ್ ಗವರ್ನರ್ ಅಲಿ ಯೆರ್ಲಿಕಾಯಾ ಟ್ವೀಟ್ ಮಾಡಿದ್ದು, ದುರದೃಷ್ಟವಶಾತ್, ಇಂದು ಇಸ್ತಿಕ್ಲಾಲ್ ಸ್ಟ್ರೀಟ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ, ಸತ್ತವರ ಸಂಖ್ಯೆ 6 ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 53ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.
Police cordon off the scene of the explosion in #Istanbul. pic.twitter.com/m0XtxNNa9T
— NEXTA (@nexta_tv) November 13, 2022
ಸ್ಫೋಟದ ನಂತರ ಇಸ್ತಾನ್ಬುಲ್ನ ಇಸ್ತಿಕ್ಲಾಲ್ ಸ್ಟ್ರೀಟ್ನಲ್ಲಿ ಆಂಬ್ಯುಲೆನ್ಸ್ಗಳು ಮತ್ತು ಪೊಲೀಸರು ಸ್ಥಳಕ್ಕೆ ತೆರಳಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
ಸ್ಫೋಟ ಸಂಭವಿಸಿದಾಗ ಜನರು ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಯೋಗಳು ತೋರಿಸುತ್ತವೆ. ಪಾದಚಾರಿಗಳು ರಕ್ಷಣೆಗಾಗಿ ಓಡುತ್ತಿರುವುದನ್ನು ನೋಡಿದ ನಂತರ ಜೋರಾಗಿ ಸ್ಫೋಟವನ್ನು ಕೇಳಲಾಗುತ್ತದೆ.
❗️An explosion in central Istanbul, Turkey
The moment of the explosion on Istiklal Street in Istanbul. There are casualties among passers-by. pic.twitter.com/kuhw9VWmVa
— NEXTA (@nexta_tv) November 13, 2022
BIG UPDATE: ಇಸ್ತಾಂಬುಲ್ ನಲ್ಲಿ ಭೀಕರ ಸ್ಫೋಟ: 4 ಮಂದಿ ಸಾವು, 38 ಜನರಿಗೆ ಗಾಯ