ಮುಂಬೈ : ಮುಂಬೈನ ಗಿರ್ಗಾಂವ್ನಲ್ಲಿನ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ 6 ಕಾರುಗಳು, 7 ಬೈಕ್ಗಳು ಸೇರಿದಂತೆ 14 ವಾಹನಗಳು ಬೆಂಗಾಹುತಿಯಾಗಿವೆ.
ಸರ್ಕಾರಿ ನೌಕರರೇ ಎಚ್ಚರ! ಈ ಸಣ್ಣ ತಪ್ಪಿನಿಂದ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಬಹುದು, “ಹುಷಾರು”
ಗೋದಾಮಿನ ಹೊರಗೆ ವಾಹನಗಳು ನಿಂತಿದ್ದವು. ಜನರು ಬೆಂಕಿ ನಂದಿಸುವ ಮುನ್ನವೇ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ವಾಹನಗಳಲ್ಲಿ ಆರು ಕಾರುಗಳು, ಏಳು ಬೈಕ್ಗಳು ಮತ್ತು ಸ್ಕೂಟರ್ಗಳು, ಒಂದು ಆಟೋರಿಕ್ಷಾ ಸೇರಿದೆ ಎನ್ನಲಾಗುತ್ತದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಟ್ಯಾಂಕರ್ಗಳ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಹಲವು ವರ್ಷಗಳಿಂದ ಗೋದಾಮು ಮುಚ್ಚಿದ್ದು, ಹೇಗೆ ಬೆಂಕಿ ಹೊತ್ತಿಕೊಂಡಿದ್ದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ʻಟ್ವಿಟರ್ʼ ಕಚೇರಿಗೆ ಕೈತೊಳೆಯುವ ಸಿಂಕ್ ಹೊತ್ತು ತಂದ ʻಎಲಾನ್ ಮಸ್ಕ್ʼ | WATCH VIDEO