ತೈವಾನ್ : ಇಂದು ಸಂಜೆ ಆಗ್ನೇಯ ತೈವಾನ್ನಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಂಪನಕ್ಕೆ ಶಾಪ್ಗಳಲ್ಲಿನ ವಸ್ತುಗಳು ನೆಲಕ್ಕುರುಳಿವೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Mysore Dasara 2022: ಹೀಗಿದೆ ‘ವಿಶ್ವವಿಖ್ಯಾತ ಮೈಸೂರು ದಸರಾ 2022’ರ ಕಾರ್ಯಕ್ರಮಗಳ ಪಟ್ಟಿ
ಭೂಕಂಪನದ ಹಿನ್ನೆಲೆಯಲ್ಲಿ ದ್ವೀಪದ ದಕ್ಷಿಣದಲ್ಲಿರುವ ಕಾವೊಶಿಯುಂಗ್ ನಗರದಲ್ಲಿ ಮೆಟ್ರೋ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜಧಾನಿ ತೈಪೆಯಲ್ಲೂ ಭೂಕಂಪದ ಅನುಭವವಾಗಿದೆ. ಈ ಕುರಿತಂತೆ ತೈವಾನ್ನ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಭೂಕಂಪದ ಆರಂಭಿಕ ತೀವ್ರತೆಯೂ ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲಾಗಿದೆ. ಇದು 10 ಕಿಮೀ (6.2 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಭೂಕಂಪದ ಕೇಂದ್ರಬಿಂದುವು ಟೈಟಂಗ್ ಕೌಂಟಿಯಲ್ಲಿತ್ತು. ಇದು ಸುಮಾರು 8,500 ಜನಸಂಖ್ಯೆಯನ್ನು ಹೊಂದಿರುವ ಸಮತಟ್ಟಾದ ಭೂಪ್ರದೇಶದ ಭತ್ತ ಬೆಳೆಯುವ ಪ್ರದೇಶವಾಗಿದೆ. ಘಟನೆಯಲ್ಲಿ ಸಾವುನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.