ನವದೆಹಲಿ : 5G ನೆಟ್ವರ್ಕ್ಗಾಗಿ ಕಾಯುವಿಕೆ ಕೊನೆಗೊಂಡಿದೆ. ದೀಪಾವಳಿಯಿಂದ ದೇಶದಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆಗಳನ್ನ ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನಿನ್ನೆ ಘೋಷಿಸಿದ್ದಾರೆ. ಅದ್ರಂತೆ, ಈ ವರ್ಷ ದೀಪಾವಳಿಯನ್ನ ಅಕ್ಟೋಬರ್ 24ರಂದು ಆಚರಿಸಲಾಗುವುದು. ಹಾಗಾಗಿ ಜೀಯೋ 5G ಕೂಡ ಅಕ್ಟೋಬರ್ 24 ರಿಂದ ಪ್ರಾರಂಭವಾಗಲಿದೆ. ಇನ್ನು ನೀವು ಈ ಸೇವೆಯನ್ನ ಹೇಗೆ ಬಳಸಲು ಸಾಧ್ಯವಾಗುತ್ತೆ ಮತ್ತು ಇದಕ್ಕಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೇನು.? ಮುಂದೆ ಓದಿ.
5G ಸಿಮ್ ಅಗತ್ಯ
5G ನೆಟ್ವರ್ಕ್ ಬಳಸಲು, ನೀವು 5G ಸ್ಮಾರ್ಟ್ಫೋನ್ ಹೊಂದಿರಬೇಕು. ಈ ನೆಟ್ವರ್ಕ್ 5G ಫೋನ್ಗಳನ್ನು ಮಾತ್ರ ಬೆಂಬಲಿಸುತ್ತದೆ. ನೀವು ವೈಫೈಗೆ ಕನೆಕ್ಟ್ ಮಾಡಿದ್ರೆ ಪರವಾಗಿಲ್ಲ, ಇಲ್ಲದಿದ್ದರೆ ನಿಮ್ಮ ಸಿಮ್ʼನ್ನ 5G ಗೆ ಅಪ್ಗ್ರೇಡ್ ಮಾಡಬೇಕಾಗುತ್ತದೆ. ಸಿಮ್ ಅಪ್ಗ್ರೇಡ್ ಮಾಡಲು, ನೀವು ಹತ್ತಿರದ ಜಿಯೋ ಅಥವಾ ಏರ್ಟೆಲ್ ಸ್ಟೋರ್ಗೆ ಭೇಟಿ ನೀಡಬೇಕು. ಇಲ್ಲದಿದ್ದರೆ ನೀವು ಹೊಸ 5G ಸಿಮ್ ಖರೀದಿಸಬೇಕಾಗುತ್ತದೆ.
ಭಾರತದಲ್ಲಿ ಅಗ್ಗದ ಸೇವೆ
ಭಾರತವು ಅಗ್ಗದ ಮೊಬೈಲ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದ್ದು, ಇನ್ನೀದೇ ಪ್ರವೃತ್ತಿ 5G ಸೇವೆಗಳಿಗೂ ಮುಂದುವರಿಯುವ ನಿರೀಕ್ಷೆಯಿದೆ. “ನಾವು ಉದ್ಯಮದಲ್ಲಿ ಸುಮಾರು 2.5 ರಿಂದ 3 ಲಕ್ಷ ಕೋಟಿ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಮೂರು ಲಕ್ಷ ಕೋಟಿ ರೂಪಾಯಿ ದೊಡ್ಡ ಹೂಡಿಕೆಯಾಗಿದೆ. ಇದು ಉತ್ತಮ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದೆ. ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ, 5G ಸೇವೆಗಳು ದೇಶದ ಬಹುತೇಕ ಎಲ್ಲಾ ಭಾಗಗಳನ್ನ ತಲುಪಲಿದೆ.
ಈ ನಾಲ್ಕು ನಗರಗಳು ಮೊದಲು 5G ಸೌಲಭ್ಯ
ದೇಶದ ಮೊದಲ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 5G ಸೇವೆಗಳನ್ನ ಪ್ರಾರಂಭಿಸಲಾಗುವುದು ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಇದರ ನಂತರ, 5G ಸೇವೆಗಳು ಪ್ರತಿ ತಿಂಗಳು ದೇಶದ ಇತರ ನಗರಗಳಲ್ಲಿಯೂ ಲಭ್ಯವಿರುತ್ತವೆ. 2023ರ ವೇಳೆಗೆ ದೇಶದ ಪ್ರತಿಯೊಂದು ಹಳ್ಳಿಗಳಲ್ಲೂ ಸೇವೆ ಲಭ್ಯವಾಗಲಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
Jio True 5G ಜನರ ಜೀವನವನ್ನ ಬದಲಾಯಿಸುತ್ತೆ.!
“ರಿಲಯನ್ಸ್ ಜಿಯೋ 5ಜಿ ಟ್ರೂ 5ಜಿ ಆಗಲಿದೆ. ಇನ್ನೀದು ಇದು 4G ಮೇಲೆ ಅವಲಂಬಿತವಾಗಿಲ್ಲ. ಜಿಯೋ ಟ್ರೂ 5G ಯೊಂದಿಗೆ ನಾವು ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನ ತರಲು ಕೆಲಸ ಮಾಡುತ್ತೇವೆ. ಇದು ಜನರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನ ತರುತ್ತದೆ. Jio 5G ಮೂಲಕ ನಾವು ದೇಶದ ಎಲ್ಲಾ ಜನರನ್ನು ಸಂಪರ್ಕಿಸುತ್ತೇವೆ. ಇನ್ನು ಜೀಯೋ 5G ಯೊಂದಿಗೆ, ನಾವು ಅಮೆರಿಕ ಮತ್ತು ಚೀನಾವನ್ನ ಹಿಂದಿಕ್ಕುತ್ತೇವೆ. ಜೀಯೋ 5G ವಿಶ್ವದಲ್ಲೇ ಅತ್ಯುತ್ತಮವಾಗಲಿದೆ” ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.