Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 56.78 ಲಕ್ಷ ವಂಚನೆ
KARNATAKA

ಮೈಸೂರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 56.78 ಲಕ್ಷ ವಂಚನೆ

By ವಸಂತ ಬಿ ಈಶ್ವರಗೆರೆ

ಮೈಸೂರು: ಕೆಲ ದಿನಗಳ ಹಿಂದೆ ಜಿಲ್ಲೆಯ ಬ್ಯಾಂಕ್ ಒಂದರಲ್ಲಿ ಇರಿಸಲಾಗಿದ್ದಂತ ಚಿನ್ನದ ತೂಕದಲ್ಲೇ ಕಡಿಮೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಬರೋಬ್ಬರಿ 56.78 ಲಕ್ಷ ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್ ಇದೆ. ಈ ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣವನ್ನು ಗಿರವಿ ಇಟ್ಟಿರುವಂತ ವಂಚಕರು, ಬರೋಬ್ಬರಿ 56.78 ಲಕ್ಷ ರೂಪಾಯಿ ಪಡೆದು ವಂಚಿಸಿರೋದು ತಿಳಿದು ಬಂದಿದೆ.

ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ಎಂಬುವರು ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ 7 ಮಂದಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

ಮೈಸೂರಿನ ಅಬ್ದುಲ್ ಜಲೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಆತನ ಪತ್ನಿ ದಿವ್ಯಾ, ಬೆಂಗಳೂರಿನ ನಾಗರತ್ನ ರೆಡ್ಡಿ ಹಾಗೂ ಟಿ ನರಸೀಪುರದ ರವೀಂದ್ರ ಕುಮಾರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೇ ಮರ್ಕೆಂಟೈಲ್ ಬ್ಯಾಂಕ್ ನಲ್ಲಿ ರವೀಂದ್ರ ಕುಮಾರ್ ಚಿನ್ನಾಭರಣ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅವರು ಆರೋಪಿಗಳೊಂದಿಗೆ ಶಾಮೀಲಾಗಿ ನಕಲಿ ಚಿನ್ನಾಭಣ ಗಿರವಿ ಇರಿಸಿದರೂ, ಅದು ಓರಿಜಿನಲ್ ಅಲ್ಲ ಎಂಬುದಾಗಿ ತಿಳಿಸದೇ, ವಂಚಕರಿಗೆ 56.78 ಲಕ್ಷ ಹಣ ನೀಡಲು ನೆರವಾಗಿದ್ದಾರೆ. 782 ಗ್ರಾಂ ನಕಲಿ ಚಿನ್ನಾಭರಣ ಇರಿಸಿ, ಈ ಕೃತ್ಯ ಎಸಗಲಾಗಿದೆ. ಆದರೇ ಜನವರಿ.26, 2026ರಂದು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದಂತ ಚಿನ್ನಾಭರಣಗಳನ್ನು ಮೌಲ್ಯ ಮಾಪನ ಮಾಡುವ ಸಂದರ್ಭದಲ್ಲಿ ಈ ನಕಲಿ ಚಿನ್ನದ ಜಾಲ ಪತ್ತೆಯಾಗಿದೆ.

Share. Facebook Twitter LinkedIn WhatsApp Email

Related Posts

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

2 Mins Read

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

2 Mins Read

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

6 Mins Read
Recent News

‘ಪೇಪರ್ ಲೀಕ್ ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ’: ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ Gen-Z ಯುವಕರಿಗೆ ಕೇಜ್ರಿವಾಲ್ ಕರೆ!

ಎಐಎಡಿಎಂಕೆ ಶಾಸಕರಿಗೆ ಬಿಗ್ ಶಾಕ್: TVK ಪರ ಮತ ಹಾಕಿದ 25 ಶಾಸಕರು ಪಕ್ಷದ ಹುದ್ದೆಗಳಿಂದ ವಜಾ!

ಅದಾನಿ ಗ್ರೂಪ್ ಜೊತೆ ಕೈಜೋಡಿಸಿದ ಉಬರ್: ಭಾರತದಲ್ಲಿ ತಲೆಯೆತ್ತಲಿದೆ ಮೊದಲ ಬೃಹತ್ ಡೇಟಾ ಸೆಂಟರ್!

‘ಇರಾನ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ಸಾಧಿಸಿದೆ’: ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಮತ್ತು ರಕ್ಷಣಾ ಕಾರ್ಯದರ್ಶಿ ಅಧಿಕೃತ ಘೋಷಣೆ!

State News
KARNATAKA

ಸುಶಿಕ್ಷಿತ ಯುವಶಕ್ತಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ…

BREAKING: ಬೆಂಗಳೂರಿನಲ್ಲಿ ಬೃಹತ್ GST ವಂಚನೆ ಜಾಲ ಪತ್ತೆ: ₹410 ಕೋಟಿ ಐಟಿಸಿ ಹಗರಣದ ಕಿಂಗ್‌ಪಿನ್ ಬಂಧನ

ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ: ಡಿಸಿಎಂ ಡಿ ಕೆ ಶಿವಕುಮಾರ್

BIG BREAKING: ರಾಜ್ಯ ಸರ್ಕಾರದಿಂದ ‘ಶಾಲಾ-ಕಾಲೇಜು’ಗಳಲ್ಲಿ ‘ಹಿಜಾಬ್ ನಿಷೇಧ’ ಆದೇಶ ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.