ಬೆಂಗಳೂರು: ನಗರದ ಬೊಮ್ಮನಹಳ್ಳಿ, ದಾಸರಹಳ್ಳಿ ಹಾಗೂ ಪಶ್ಚಿಮ ವಲಯ ವ್ಯಾಪ್ತಿಯಲ್ಲಿಂದು ಗೋಡನ್ ಹಾಗೂ ಮಳಿಗೆಗಳ ಮೇಲೆ ದಾಳಿ ನಡೆಸಿದ ವೇಳೆ 5500 ಕೆ.ಜಿ(5.5 ಮೆ.ಟ) ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಪಾಲಿಕೆ ಜಪ್ತಿ ಮಾಡಿ 45,000 ದಂಡ ವಿಧಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ ಪ್ಲಾಸ್ಟಿಕ್ ಬಳಕೆ ಮಾಡುವ ಗೋಡನ್ ಹಾಗೂ ಅಂಗಡಿ-ಮುಂಗಟ್ಟುಗಳ ಮೇಲೆ ಆಗಿಂದ್ದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ದಾಳಿ ನಡೆಸಲಾಗುತ್ತಿದೆ. ಅದರಂತೆ ಇಂದು 3 ವಲಯಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಬೊಮ್ಮನಹಳ್ಳಿ ವಲಯ:
ಬೊಮ್ಮನಹಳ್ಳಿ ವಲಯ ಬೆಂಗಳೂರು ದಕ್ಷಿಣ ಸಿಂಗಸಂದ್ರ ವ್ಯಾಪ್ತಿಯಲ್ಲಿ ಇಂದು ಗೋಡನ್ ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 4,500 ಕೆ.ಜಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಪಾಲಿಕೆ ವಶಕ್ಕೆ ಪಡೆದು, ಗೋಡನ್ ಮಾಲೀಕರಿಗೆ 25000 ರೂ. ದಂಡ ವಿಧಿಸಲಾಗಿದೆ. ಮತ್ತೆ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟೆಚ್ಚರಿಕೆ ನೀಡಲಾಗಿದೆ.
ದಾಸರಹಳ್ಳಿ ವಲಯ:
ದಾಸರಹಳ್ಳಿ ವಲಯ ರಾಜ್ ಗೋಪಾಲ್‌ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತಯಾರಿಕಾ ಗೋಡನ್ ಗೆ ಬಿ.ಎಸ್.ಡ.ಬ್ಲ್ಯೂ.ಎಂ.ಎಲ್ ನ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ ರವರ ನೇತೃತ್ವದಲ್ಲಿ ಇಂದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಒಮ್ಮೆ ಬಳಸುವ ಗಿಫ್ಟ್ ಪ್ಯಾಕಿಂಗ್ ರಾಪರ್, ಹ್ಯಾಂಡ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಸಿಲ್ವರ್ ಲೇಪಿತ ಪ್ಲೇಟ್, ಸಿಲ್ವರ್ ಕವರ್ ಮತ್ತು ಪ್ಲಾಸ್ಟಿಕ್ ರೋಲ್ ಸೇರಿದಂತೆ ಇನ್ನಿತರೆ 600 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು 5000 ರೂ. ದಂಡ ವಿಧಿಸಲಾಯಿತು. ಅಲ್ಲದೇ ಮತ್ತೆ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟೆಚ್ಚರಿಕೆ ನೀಡಲಾಗಿದೆ.
ಈ ವೇಳೆ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಭೀಮೇಶ್, ಚೀಫ್ ಮಾರ್ಷಲ್, ಮಾರ್ಷಲ್ ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪಶ್ಚಿಮ ವಲಯ:
ಪಶ್ಚಿಮ ವಲಯ ಕೆ.ಆರ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಇಂದು ಮಾರ್ಷಲ್ ಮೇಲ್ವಿಚಾರಕರು ಮತ್ತು ತಂಡದಿಂದ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ನಡೆಸಿ 3 ಅಂಗಡಿಗಳಿಗೆ 15000 ರೂ. ದಂಡ ವಿಧಿಸಿ 300 ಕೆಜಿಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ‘2 ಲಕ್ಷ ಸಾಲ’ ಲಭ್ಯ, ನೀವೂ ಅರ್ಜಿ ಸಲ್ಲಿಸಿ