ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮಮಂದಿರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಶ್ರೀರಾಮಮಂದಿರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ವಿಶ್ವ ಇಂದು ರಾಮಮಯ ಆಗಿದೆ. ಶ್ರೀರಾಮ ಭಕ್ತರ ಮನಸ್ಸು ಇಂದು ಬಹಳಷ್ಟು ಆನಂದವಾಗಿದೆ. ಅಂದಿನ ಸಂಕಲ್ಪ ಇಂದು ಸಿದ್ಧಿಯಾಗಿದೆ. 500 ವರ್ಷಗಳ ಅಗ್ನಿ ಯಜ್ಞ ಇಂದು ಶಾಂತಗೊಂಡಿದೆ ಭವ್ಯವಾದ ಮಂದಿರದಲ್ಲಿ ಶ್ರೀರಾಮ ವಿರಾಜಮಾನರಾಗಿದ್ದಾರೆ.ಕೇಸರಿ ಧ್ವಜ ಕನಸುಗಳ ಸಾಕಾರದ ಸ್ವರೂಪ. ಶತಮಾನಗಳ ವೇದನೆಗೆ ಇಂದು ಪೂರ್ಣವಿರಾಮ ಸಿಕ್ಕಿದೆ. ಮರ್ಯಾದಾ ಪುರುಷೋತ್ತಮರಾಗಿ ರಾಮ ಅಯೋಧ್ಯೆಗೆ ಬಂದರು. ಶ್ರೀರಾಮ ಮಂದಿರದ ಧರ್ಮಧ್ವಜ ಏಕರೂಪದ ಪ್ರತೀಕವಾಗಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಪೂರ್ಣಗೊಳ್ಳಲಿದೆ. ಶ್ರೀರಾಮನ ವ್ಯಕ್ತಿತ್ವವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿಕೆ ನೀಡಿದರು.
ಧರ್ಮ ಸತ್ಯದ ಮೇಲೇ ನಿಂತಿದೆ ಎಂಬ ಸಂದೇಶ ಜಗತ್ತಿನಲ್ಲಿ ಕರ್ಮ ಹಾಗೂ ಕರ್ತವ್ಯದ ಸಂದೇಶ ನೀಡುತ್ತದೆ ಬೇದ ಭಾವ ದೌರ್ಜನ್ಯಗಳ ಅಂತ್ಯದ ಪ್ರತೀಕವಾಗಿದೆ. ವನವಾಸಕ್ಕೆ ತೆರಳಿದ್ದ ರಾಮ ಯುವರಾಜ ಆಗಿದ್ದ ವನವಾಸದಿಂದ ವಾಪಸ್ ಆದಾಗ ಮರ್ಯಾದ ಪುರುಷೋತ್ತಮನಾಗಿದ್ದ. ಶ್ರೀರಾಮ ಮಂದಿರದ ಮೇಲೆ ಧರ್ಮಧ್ವಜ ಸ್ಥಾಪಿಸಲಾಗಿದೆ. ಧರ್ಮಧ್ವಜ ಸತ್ಯದ ಪ್ರತೀಕವಾಗಿದೆ. ಧರ್ಮ ಧ್ವಜ ನಮ್ಮ ಸಂತರ ಸಾಧನೆಯ ಪ್ರತೀಕವಾಗಿದೆ. ಧರ್ಮಧ್ವಜ ಶ್ರೀರಾಮನ ಆದರ್ಶಗಳ ಉದ್ಘೋಷವಾಗಿದೆ. ಇದು ಸತ್ಯಕ್ಕೆ ಗೆಲುವು ಸಿಗುತ್ತೆ ಎಂಬ ಉದ್ಘೋಷ ಸಾರುತ್ತದೆ ಎಂದರು.
ಮೋದಿ ಅವರು ಶ್ರೀ ರಾಮಲಲ್ಲಾ ದೇವಾಲಯದ ಮೇಲ್ಭಾಗದಲ್ಲಿ, ಅಂದರೆ ಮುಖ್ಯ ಶಿಖರದ ಮೇಲೆ ಔಪಚಾರಿಕವಾಗಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಬಲರಾಮನ ತ್ಯಾಗದ ನಂತರ, ಇದು ದೇವಾಲಯ ನಿರ್ಮಾಣ ಪೂರ್ಣಗೊಂಡ ಬಲವಾದ ಸಂಕೇತವಾಗಿ ನಿಲ್ಲುತ್ತದೆ. ಅಯೋಧ್ಯೆಯ ಸಂಪೂರ್ಣ ರಾಮ ಮಂದಿರವು ಹಬ್ಬದ ನೋಟವನ್ನು ಪಡೆದುಕೊಂಡಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಭಕ್ತರು ಮತ್ತು ಆಹ್ವಾನಿತರು ಅಯೋಧ್ಯೆಯನ್ನು ತಲುಪಿದ್ದಾರೆ.
#WATCH | Ayodhya Dhwajarohan | PM Modi says, "… Aaj Sampurna Bharat, Sampurna Vishwa Ram-may hai. Har Ram Bhakt ke hriday mein adwitiya santosh hai. Aseem kritagyata hai. Apaar alaukik anand hai. Sadiyon ke ghaav bhar rahe hain. Sadiyon ki vedna aaj viraam paa rahi hai. Sadiyon… pic.twitter.com/iVD2hjlXLr
— ANI (@ANI) November 25, 2025








