ಶಾಮ್ಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 5 ವರ್ಷದ ಬಾಲಕಿಯೊಬ್ಬಳು ಊಟ ಮಾಡುವಾಗ ಮಾವಿನ ಹಣ್ಣುಗಳನ್ನು ಕೇಳಿದ್ದಕ್ಕೆ ತನ್ನ ಸೋದರ ಮಾವನಿಂದಲೇ ಕೊಲೆಯಾದ ಭಯಾನಕ ಘಟನೆ ವರದಿಯಾಗಿದೆ. 33 ವರ್ಷದ ವ್ಯಕ್ತಿಯನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಪದೇ ಪದೇ ಮಾವಿನ ಹಣ್ಣು ಬೇಕು ಅಂತ ಕೇಳಿದ್ದರಿಂದ ಕೋಪಗೊಂಡ ವ್ಯಕ್ತಿ ಮೊದಲು ಬಾಲಿಕಗೆ ತಲೆಗೆ ಹೊಡೆದನು ಎನ್ನಲಾಗಿದೆ. ಇದೇ ವೇಳೆ ಬಾಲಕಿಗೆ ರಕ್ತಸ್ರಾವವಾಗಲು ಪ್ರಾರಂಭಿಸಿದಾಗ ಆತ ಭಯಭೀತನಾಗಿ ಚಾಕುವಿನಿಂದ ಅವಳ ಗಂಟಲನ್ನು ಕತ್ತರಿಸಿದನಂತೆ. ನಂತರ ಆರೋಪಿಯು ಅವಳ ದೇಹವನ್ನು ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಉಮರ್ದೀನ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಗುರುವಾರ ರಾತ್ರಿ ಪೊಲೀಸರು ಹಿಡಿದು ಶುಕ್ರವಾರ ಜೈಲಿಗೆ ಕಳುಹಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಉಮರ್ದೀನ್ ನನ್ನು ಗ್ರಾಮದ ಅರಣ್ಯದಿಂದ ಬಂಧಿಸಲಾಗಿದೆ. ಚಾಕು ಮತ್ತು ಕಬ್ಬಿಣದ ರಾಡ್ ಸೇರಿದಂತೆ ಕೊಲೆಯ ಆಯುಧವನ್ನು ಸಹ ನಾವು ವಶಪಡಿಸಿಕೊಂಡಿದ್ದೇವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದು ಶಾಮ್ಲಿಯ ಹೆಚ್ಚುವರಿ ಎಸ್ಪಿ ಒಪಿ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.