ಬೆಂಗಳೂರು : ಕೆ ಪಿ ಅಗ್ರಹಾರದ ಭುವನೇಶ್ವರ ನಗರದಲ್ಲಿ ಕೇಕ್ ತಿಂದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಂಜಿನಪ್ಪ ಅವರು ಹೇಳಿಕೆ ನೀಡಿದ್ದು, ಕೇಕ್ ತಿಂದ ಕೆಲವೇ ಕ್ಷಣಗಳಲ್ಲಿ ಮಗು ಸಾವನಪ್ಪಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಂಜನಪ್ಪ ಹೇಳಿಕೆ ನೀಡಿದ್ದು, ಇದು ಫುಡ್ ಪಾಯ್ಸನ್ ಇಂದ ಆಗಿದೆ. ಆಹಾರ ಸೇವಿಸಿದ ಬಳಿಕ ಮಗು ಸಡನ್ ಆಗಿ ಮೃತಪಟ್ಟಿದೆ. ಅಲ್ಟ್ರಾ ಸೌಂಡ್ ಸ್ಕ್ಯಾನ್ಟ್ ಮಾಡಲಾಗಿದೆ.
ಮಗುವಿನ ಸಾವಿನ ನಿಖರ ಕಾರಣ ವರದಿಯಲ್ಲಿ ತಿಳಿಯಬೇಕಿದೆ. ಯಾವ ಕಾರಣ ಅಂತ ವರದಿ ನೋಡಿದ ಬಳಿಕ ಹೇಳುತ್ತೇವೆ. ಮೃತ ಮಗುವಿನ ತಂದೆ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಜಿನಪ್ಪ ಹೇಳಿಕೆ ನೀಡಿದರು. ಕೆ ಪಿ ಅಗ್ರಹಾರದ ಭುವನೇಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿತ್ತು.