ತೆಲಂಗಾಣ: ಗುರುವಾರ ತಡರಾತ್ರಿ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಪಾಲಮುರು ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕ್ರೇನ್ ತಂತಿ ತುಂಡಾದ ಪರಿಣಾಮ 5 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಯೋಜನೆಯ ಪ್ಯಾಕೇಜ್ 1ರಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಲಾಪುರ ಬ್ಲಾಕ್ನ ಯಳ್ಳೂರು ಗ್ರಾಮದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಐವರು ಕಾರ್ಮಿಕರನ್ನು ಪೂರ್ವ ಗೋದಾವರಿ ಜಿಲ್ಲೆಯ ಸಿನು (35), ಜಾರ್ಖಂಡ್ನ ಭೋಲಾನಾಥ್ (40), ಪ್ರವೀಣ್, ಕಮಲೇಶ್ ಮತ್ತು ಸೋನು ಕುಮಾರ್ (ಮೂವರೂ ಬಿಹಾರದ ಮೂಲದವರು) ಎಂದು ಗುರುತಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ಇನ್ಸ್ಪೆಕ್ಟರ್ ಯಾಲಾದ್ರಿ ತಿಳಿಸಿದ್ದಾರೆ.
100 ಅಡಿ ಆಳದ ಸುರಂಗದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರು 70 ಅಡಿ ಮೇಲಕ್ಕೆ ಬರುತ್ತಿದ್ದಂತೆ, ಕ್ರೇನ್ನ ಕೇಬಲ್ ತುಂಡಾಗಿ ಮತ್ತೆ ಅವರು ಆಳವಾದ ಸುರಂಗಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ. ಇನ್ನೂ, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇಂದು ಮುಂಜಾನೆ ಹೈದರಾಬಾದ್ನ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 35,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪಾಲಮುರು ರಂಗಾ ರೆಡ್ಡಿ ನೀರಾವರಿ ಯೋಜನೆಯು ಶ್ರೀಶೈಲಂ ಜಲಾಶಯದ ಮುಂಭಾಗದಲ್ಲಿರುವ ಕೃಷ್ಣಾ ನದಿಯಿಂದ ರಂಗಾ ರೆಡ್ಡಿ ಜಿಲ್ಲೆಯ ಶಾದ್ನಗರ ಬಳಿಯ ಉದ್ದೇಶಿತ ಕೆಪಿ ಲಕ್ಷ್ಮೀದೇವಿಪಲ್ಲಿ ಜಲಾಶಯಕ್ಕೆ ಐದು ಹಂತಗಳಲ್ಲಿ ನೀರನ್ನು ಪಂಪ್ ಮಾಡುವ ಉದ್ದೇಶ ಹೊಂದಿದೆ.
Big news; ಪಾಕಿಸ್ತಾನದಲ್ಲಿ DSP ಹುದ್ದೆ ಅಲಂಕರಿಸಿದ ಮೊದಲ ಅಲ್ಪಸಂಖ್ಯಾತ ಹಿಂದೂ ಮಹಿಳೆ ʻಮನೀಶಾ ರೋಪೇಟಾʼ!
Video: ತಂದೆಯ ಕೈಮೇಲೆ ಮೇಲೆ ಹಚ್ಚೆ ರೂಪದಲ್ಲಿ ಮೂಡಿದ ಗಾಯಕ ʻಸಿಧು ಮೂಸೆ ವಾಲಾʼ ಭಾವಚಿತ್ರ…
BREAKING NEWS : ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಇಂದು ತಿಪಟೂರು ಬಂದ್ ಗೆ ಕರೆ