ನವದೆಹಲಿ: ಲೇಹ್ನ ದೌಲತ್ ಬೇಗ್ ಓಲ್ಡಿ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಶನಿವಾರ ಮುಂಜಾನೆ ನದಿ ದಾಟುವ ಅಭ್ಯಾಸದ ಸಮಯದಲ್ಲಿ ಟ್ಯಾಂಕ್ ಅಪಘಾತಕ್ಕೀಡಾದ ಪರಿಣಾಮ ಭಾರತೀಯ ಸೇನೆಯ ಐವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಕೂಡ ಸೇರಿದ್ದಾರೆ.

ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸೈನಿಕರು ವಾಡಿಕೆಯ ವ್ಯಾಯಾಮದಲ್ಲಿದ್ದರು. ಲೇಹ್ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ಹ್ ಬಳಿ ಬೋಧಿ ನದಿಯನ್ನು ತಮ್ಮ ಟಿ -72 ಟ್ಯಾಂಕ್ನಲ್ಲಿ ದಾಟುವಾಗ, ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಉಕ್ಕಿ ಹರಿದ ಪರಿಣಾಮ, ಟ್ಯಾಂಕರ್ ಹಾಗೂ ಸೈನಿಕರು ನೀರಿನಲ್ಲಿ ಮುಳುಗಿ ಹುತಾತ್ಮರಾಗಿದ್ದಾರೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಎಲ್ಲಾ ಐದು ಶವಗಳನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ.

ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮರಾದಂತ ಯೋಧರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ʻNEETʼ ಕೋಚಿಂಗ್ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

Share.
Exit mobile version