ಪುಣೆ: ದಿನೇ ದಿನೇ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಹೊಸ ವರಸೆ ತೋರಿಸುತ್ತಿದೆ. ಇದೀಗ ಬೆಳಗಾವಿ ಗಡಿ ವಿಚಾರದಲ್ಲಿ ಕರುನಾಡಿಗೆ ಭಾರೀ ಸವಾಲೆಸೆದಿದ್ದು, ಕರ್ನಾಟಕದ 5 ನಗರಗಳು, 865 ಮರಾಠಿ ಭಾಷಿಗರು ಇರುವಂತ ಹಳ್ಳಿಗಳು ನಮ್ಮದು ಎಂಬುದಾಗಿ ವಿಧಾನಮಂಡಲದಲ್ಲಿ ಸರ್ವಾನುಮತದ ನಿರ್ಣಯಕ್ಕೆ ಅಂಗೀಕಾರ ನೀಡಿದೆ.
ನಿನ್ನೆಯ ಮಂಗಳವಾರದಂದು ಮಹಾರಾಷ್ಟ್ರ ಸರ್ಕಾರದಿಂದ ಬೆಳಗಾವಿ ಗಡಿ ವಿಚಾರವಾಗಿ, ಕರ್ನಾಟಕದ ನಿರ್ಣಯ ಖಂಡಿಸಿ, ಖಂಡನಾ ನಿರ್ಣಯ ಮಂಡಿಸಲಾಗಿದೆ. ಮಹಾರಾಷ್ಟ್ರ ವಿಧಾನ ಮಂಡಲದಲ್ಲಿ ಮಂಡಿಸಿದಂತ ಖಂಡನಾ ನಿರ್ಣಯದಲ್ಲಿ ಕರ್ನಾಟಕದ ಬೆಳಗಾವಿ, ಬೀದರ್, ಕಾರವಾರ, ನಿಪ್ಪಾಣಿ, ಭಾಲ್ಕಿ ಹಾಗೂ 865 ಮರಾಠಿ ಭಾಷಿಕ ಹಳ್ಳಿಗಳು ತನ್ನವು ಎಂದು ಹೇಳಿಕೊಂಡಿದೆ.
ಇನ್ನೂ ಈ ಭಾಗಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವ ಕಾನೂನಾತ್ಮಕ ಹೋರಾಟ ತೀವ್ರಗೊಳಿಸುವ ಗೊತ್ತುವಳಿಯನ್ನು ಉಭಯ ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಸಾರಿಗೆ ಸೇವೆಯನ್ನು ಲಾಭದಾಯಕವಾಗಿಸಲು ಕ್ರಮ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ