ನವದೆಹಲಿ: ಶುಕ್ರವಾರ ಸಂಜೆ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ANI ವರದಿ ಮಾಡಿದೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಮುಖ ಭೂಕಂಪದ ಕೆಲವೇ ದಿನಗಳ ನಂತರ, ಶುಕ್ರವಾರ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ( National Centre for Seismology ) ಪ್ರಕಾರ, ನೇಪಾಳ ಭೂಕಂಪದ ಕಂಪನವು ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಾಧ್ಯಂತ ಸಹ ಕಂಪನದ ಅನುಭವವನ್ನು ಉಂಟು ಮಾಡಿದೆ ಎಂದಿದೆ.
ಭೂಕಂಪನವು ಸಂಜೆ 7:52 ಕ್ಕೆ (ಸ್ಥಳೀಯ ಸಮಯ) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಇದರ ಕೇಂದ್ರಬಿಂದು 20 ಕಿಲೋಮೀಟರ್ ಆಳದಲ್ಲಿದೆ.
An earthquake of magnitude 5.0 on the Richter scale struck Nepal, with light tremors being felt in North India. pic.twitter.com/u9IY0WIcjX
— ANI (@ANI) April 4, 2025
GOOD NEWS: ಶೀಘ್ರವೇ ‘ರಾಜ್ಯ ಸರ್ಕಾರಿ ನೌಕರ’ರಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾದ ಸರ್ಕಾರ