Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋಮ್ ಲೋನ್ `ವಿಮೆ’ ಏಕೆ ಅಗತ್ಯ? ಸಾಲಗಾರರು ತಿಳಿದುಕೊಳ್ಳಲೇಬೇಕಾದ ಮುಖ್ಯ ಮಾಹಿತಿ !

27/03/2026 11:30 AM

ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ

27/03/2026 11:22 AM

ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ: ಇತಿಹಾಸದಲ್ಲೇ ಮೊದಲ ಬಾರಿಗೆ 94.29ಕ್ಕೆ ಕುಸಿತ!

27/03/2026 11:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ
KARNATAKA

ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ

By kannadanewsnow0527/03/2026 11:22 AM

ಬೆಂಗಳೂರು, ಮಾ.27: * ಬೆಂಗಳೂರು ಉತ್ತರ ತಾಲೂಕು ಜಾರಕಬಂಡೆ ಶ್ರೀಗಂಧದ ಕಾವಲ್ ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ ಕೂಡಲೇ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿ ಪ್ರಕ್ರಿಯೆ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಲಿಖಿತ ಸೂಚನೆ ನೀಡಿದ್ದಾರೆ.

ಈ ಸಂಬಂಧ ಅಪರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಎರಡು ಪ್ರತ್ಯೇಕ ಸೂಚನೆ ನೀಡಿರುವ ಅವರು, ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452ಎಕರೆ 4½ಗಂಟೆ ಭೂ ಮಂಜೂರಾತಿಯನ್ನು ರಾಜ್ಯ ಸರ್ಕಾರ 2017ರ ಅಕ್ಟೋಬರ್ 09ರಂದು ರದ್ದುಗೊಳಿಸಿದ್ದು, ಇದನ್ನು ಅತ್ಯಗತ್ಯವಾದ ಶ್ವಾಸತಾಣವಾಗಿ ಉಳಿಸಲು ತೀರ್ಮಾನಿಸಲಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹಿತದ ದೃಷ್ಟಿಯಿಂದ ಭೂಮಂಜೂರಾತಿ ರದ್ದು ಪಡಿಸಿದ ಬಳಿಕವೂ ಭಾರತೀಯ ವಾಯುಪಡೆ ಸದರಿ ಭೂಮಿಯನ್ನು ಬಳಸಲು, ಅರಣ್ಯ (ಸಂರಕ್ಷಣಾ) ಕಾಯ್ದೆ-1980 ರಡಿಯಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರ್ಯಾಯ ಭೂಮಿ ನೀಡುವಂತೆ ತಿಳಿಸಿದ್ದರೂ ವಾಯುಪಡೆ ನಿಯಮ ಉಲ್ಲಂಘಿಸಿದೆ. ಈ ನಿಟ್ಟಿನಲ್ಲಿ 64ಎ ನೋಟಿಸ್ ನೀಡಿ ಒತ್ತುವರಿ ತೆರವು ಮಾಡಿಸಲು ಸೂಚಿಸಿದ್ದಾರೆ.

ಈ ಜಮೀನಿಗೂ ವಾಯುಪಡೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಈಶ್ವರ ಖಂಡ್ರೆ, ಇನ್ನು ಮುಂದೆ ಸದರಿ ಪ್ರದೇಶದಲ್ಲಿ ಅನಿವಾರ್ಯವಾಗಿ ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ನಿಯಮಾನುಸಾರ ಅರಣ್ಯ ಇಲಾಖೆಯಿಂದ (ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ) ಅನುಮತಿ ಪಡೆಯುವಂತೆ ಸುತ್ತೋಲೆ ಹೊರಡಿಸಲು ಮತ್ತು ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲು ಕ್ರಮ ವಹಿಸುವಂತೆಯೂ ನಿರ್ದೇಶನ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಹೋಮ್ ಲೋನ್ `ವಿಮೆ’ ಏಕೆ ಅಗತ್ಯ? ಸಾಲಗಾರರು ತಿಳಿದುಕೊಳ್ಳಲೇಬೇಕಾದ ಮುಖ್ಯ ಮಾಹಿತಿ !

27/03/2026 11:30 AM1 Min Read

ರಾಜ್ಯದ ರೈತರ ಗಮನಕ್ಕೆ: ಪಹಣಿಯಲ್ಲಿ ಹೆಸರು ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ !

27/03/2026 11:12 AM2 Mins Read

ರಕ್ತಹೀನತೆಯ ವಿರುದ್ಧ ಹೋರಾಟ : ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯನ್ನು ನಿರ್ಮಿಸಿದ ಡ್ಯಾನೋನ್ ಇಂಡಿಯಾ

27/03/2026 11:07 AM2 Mins Read
Recent News

ಹೋಮ್ ಲೋನ್ `ವಿಮೆ’ ಏಕೆ ಅಗತ್ಯ? ಸಾಲಗಾರರು ತಿಳಿದುಕೊಳ್ಳಲೇಬೇಕಾದ ಮುಖ್ಯ ಮಾಹಿತಿ !

27/03/2026 11:30 AM

ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ

27/03/2026 11:22 AM

ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ: ಇತಿಹಾಸದಲ್ಲೇ ಮೊದಲ ಬಾರಿಗೆ 94.29ಕ್ಕೆ ಕುಸಿತ!

27/03/2026 11:22 AM

ರಾಜ್ಯದ ರೈತರ ಗಮನಕ್ಕೆ: ಪಹಣಿಯಲ್ಲಿ ಹೆಸರು ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ !

27/03/2026 11:12 AM
State News
KARNATAKA

ಹೋಮ್ ಲೋನ್ `ವಿಮೆ’ ಏಕೆ ಅಗತ್ಯ? ಸಾಲಗಾರರು ತಿಳಿದುಕೊಳ್ಳಲೇಬೇಕಾದ ಮುಖ್ಯ ಮಾಹಿತಿ !

By kannadanewsnow5727/03/2026 11:30 AM KARNATAKA 1 Min Read

ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇದಕ್ಕಾಗಿ ಬಹುತೇಕರು ಬ್ಯಾಂಕುಗಳಿಂದ ಹೋಮ್ ಲೋನ್ (ಗೃಹ ಸಾಲ) ಪಡೆಯುತ್ತಾರೆ.…

ಜಾರಕಬಂಡೆ ಕಾವಲ್ ನಲ್ಲಿ ವಾಯುಪಡೆ ವಶದಲ್ಲಿರುವ 444 ಎಕರೆ ಭೂಮಿ ವಾಯುಪಡೆ ಅರಣ್ಯಭೂಮಿ ಮರುವಶಕ್ಕೆ 64ಎ ಪ್ರಕ್ರಿಯೆ: ಈಶ್ವರ ಖಂಡ್ರೆ ಸೂಚನೆ

27/03/2026 11:22 AM

ರಾಜ್ಯದ ರೈತರ ಗಮನಕ್ಕೆ: ಪಹಣಿಯಲ್ಲಿ ಹೆಸರು ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ !

27/03/2026 11:12 AM

ರಕ್ತಹೀನತೆಯ ವಿರುದ್ಧ ಹೋರಾಟ : ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯನ್ನು ನಿರ್ಮಿಸಿದ ಡ್ಯಾನೋನ್ ಇಂಡಿಯಾ

27/03/2026 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.