ನವದೆಹಲಿ: ಕಳೆದ ಕೆಲವು ದಿನಗಳಿಂದ ಡ್ಯಾನ್ಸ್, ಜಿಮ್, ಆ್ಯಕ್ಟಿಂಗ್ ಮಾಡುತ್ತಾ ಹಠಾತ್ ಸಾವಿನ ಸುದ್ದಿಗಳು ಹೊರಬೀಳುತ್ತಿವೆ.ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಜನರಲ್ಲಿ ಭಯವೂ ಸೃಷ್ಟಿಯಾಗುತ್ತಿದೆ. ಈ ನಡುವೆ ಅತ್ತಿಗೆಯ ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿಯೊಬ್ಬ ವೇದಿಕೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿ ತುಂಬಾ ಖುಷಿಯಾಗಿ ಮದುವೆಯಲ್ಲಿ ಬೇರೆಯವರ ಜೊತೆ ಡ್ಯಾನ್ಸ್ ಮಾಡುತ್ತಿದ್ದಾನೆ, ಡ್ಯಾನ್ಸ್ ಮಾಡ್ತಾ ಇದ್ದಕಿದ್ದಂತೆ ಕೆಳಗೆ ಬಿದ್ದು ಸಾಯುವುದನ್ನು ಕಾಣಬಹುದಾಗಿದೆ. ಅಂದ ಹಾಗೇ ಈ ಘಟನೆ ರಾಜಸ್ಥಾನದ ಪಾಲಿ (ರಾಜಸ್ಥಾನ ಪಾಲಿ ವೈರಲ್ ವಿಡಿಯೋ) ಜಿಲ್ಲೆಯಿಂದ ಪ್ರಕರಣ ವರದಿಯಾಗಿದ್ದು, ಮೃತರನ್ನು 42 ವರ್ಷದ ಅಬ್ದುಲ್ ಸಲೀಂ ಪಠಾಣ್ ಎಂದು ಗುರುತಿಸಲಾಗಿದ್ದು, ಇವರು ಸರ್ಕಾರಿ ಶಾಲೆಯಲ್ಲಿ ಪಿಟಿಐ (ದೈಹಿಕ ತರಬೇತಿ ಬೋಧಕ) ಆಗಿದ್ದರು ಎನ್ನಲಾಗಿದೆ.
एक और हंसते-गाते-नाचते मौत LIVE
राजस्थान के पाली में शादी में डांस करते हुए एक युवा टीचर की मौत हो गई। जिस तरह से लगातार ऐसी डरावनी खबरें/तस्वीर आ रही हैईं,एक्सपर्ट की टीम से इन मौतों के कारणों के पड़ताल करने में क्या दिक़्क़त है? कितनी मौत के बाद हम गम्भीर होंगे? pic.twitter.com/LcVnFn2v7I
— Narendra nath mishra (@iamnarendranath) November 13, 2022