ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರ (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕದ ಪ್ರದೇಶದ ಸ್ಥಳೀಯ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅರ್ಹತೆ ಪಡೆದಂತ ಅಭ್ಯರ್ಥಿಗಳ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 402 ಪಿಎಸ್ಐ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಮೇ.8ರಂದು ಲಿಖಿತ ಪರೀಕ್ಷೆಯನ್ನು ನಿಗದಿ ಪಡಿಸಿತ್ತು. ಆದ್ರೇ ಲೋಕಸಭಾ ಚುನಾವಣೆಯ ಕಾರಣ ಮುಂದೂಡಿಕೆ ಮಾಡಲಾಗಿತ್ತು. ಆ ಬಳಿಕೆ ಸೆಪ್ಟೆಂಬರ್.22, 2024ರಂದು ಲಿಖಿತ ಪರೀಕ್ಷೆಗೆ ಮರು ದಿನಾಂಕ ನಿಗದಿ ಪಡಿಸಿ ಪ್ರಕಟಿಸಲಾಗಿತ್ತು.
ಇದೀಗ 402 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಂತ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ. 402 ಪಿಎಸ್ಐ ನೇಮಕಾತಿ ಹುದ್ದೆಗಳಿಗೆ ಬರೋಬ್ಬರಿ 66,990 ಮಂದಿ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ.
ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಸಿಎಂ ತಾತ್ವಿಕ ಒಪ್ಪಿಗೆ
BREAKING: ರಾಜ್ಯ ಸರ್ಕಾರದಿಂದ ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನು ನೇಮಿಸಿ ಆದೇಶ: ಇಲ್ಲಿದೆ ಪಟ್ಟಿ
ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ, 30 ಜಿಲ್ಲೆಗಳಲ್ಲಿ 24.50 ಲಕ್ಷ ಜನರಿಗೆ ತೊಂದರೆ