ಬೆಂಗಳೂರು: ನಗರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಒಂದು ವರ್ಷದಲ್ಲಿ ಇದುವರೆಗೆ 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಜೊತೆಗೆ 68 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗ: ಡಿ.18ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚಿಸಿದ್ದೇವೆ. ಹೊಸದಾಗಿ 4 ಸಂಚಾರಿ ಉಪ ವಿಭಾಗಗಳ ರಚನೆ ಮಾಡಲಾಗಿದೆ. ಎರಡು ಕಾನೂನು ಸುವ್ಯವಸ್ಥೆ ಉಪ ವಿಭಾಗಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆ ಮಾಡುಲು ಸಾಧ್ಯವಾಗಲಿಲ್ಲ. ವಾರ್ಷ ಜೋರಾಗಿ ಮಾಡುವ ಸಾದ್ಯತೆ ಇದೆ. ಪೊಲೀಸರು ಭದ್ರತೆ ಇರತ್ತದೆ. ಕಣ್ಗಾವಲಿಗೆ ನಾಲ್ಕು ಸಾವಿರ ಕ್ಯಾಮರಾ ಇದೆ. ಅದರೆ ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನುಮತಿ ಪಡೆಯದೆ ಕ್ಲಬ್, ಪಬ್ ಮತ್ತು ಕ್ಯಾಬರೆಗಳನ್ನು ತೆಗೆದಿದ್ದರೇ ಮುಚ್ಚಲೇ ಬೇಕು ಎಂದು ಎಚ್ಚರಿಕೆ ನೀಡಿದರು.