ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಸಂದೀಪ್ ಬೆಳಗಾವಿ ಎಸ್ ಪಿ ಗೆ ಪತ್ರ ಬರೆದಿದ್ದು, FIR ದಾಖಳಿಸುವಂತೆ ಪತ್ರ ಬರೆದಿದ್ದಾನೆ. ಬೆಳಗಾವಿ ಎಸ್ಪಿ ಕೆ.ರಾಮರಾಜನಿಗೆ ದೂರು ದಾರಿ ಸಂದೀಪ್ ಪಾಟೀಲ್ ಪತ್ರ ಬರೆದಿದ್ದಾನೆ.
ಮಹಾರಾಷ್ಟ್ರ ಎಸ್ಐಟಿ ಪೊಲೀಸ್ರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ ಘಟನೆ ಸಂಭಂದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ ಅವುಗಳ ಆಧಾರದ ಮೇಲೆ FIR ದಾಖಲಿಸುವಂತೆ ಸಂದೀಪ್ ಪಾಟೀಲ್ ಒತಾಯಿದ್ದಾನೆ. 400 ಕೋಟಿ ದರೋಡೆ ಪ್ರಕರಣದ ದೂರುದಾರ ಆಗಿರುವ ಸಂದೀಪ್ ಪಾಟೀಲ್, ಈ ಒಂದು ಪ್ರಕರಣ ಸಂಬಂಧಪಟ್ಟಂತೆ ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ಪೊಲೀಸ್ರ ತನಿಖೆಯ ಬಗ್ಗೆ ಸಂದೀಪ್ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದು ಈಗಾಗಲೇ ಎಸ್ಐಟಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ವಿರುದ್ಧ ದೂರು ದಾಖಲಿಸಿದ್ದಾನೆ. ಮಹಾರಾಷ್ಟ್ರ ಪೊಲೀಸ್ ನಿರ್ದೇಶಕರ ವಿರುದ್ಧ ಹೈಕೋರ್ಟಿಗೆ ದೂರು ಸಲ್ಲಿಸಿದ್ದಾನೆ. ಎಸ್ಐಟಿ ತಂಡದ ವಿರುದ್ಧವೇ ಸಂದೀಪ್ ಪಾಟೀಲ್ ದೂರು ನೀಡಿದ್ದಾನೆ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಅನುಮಾನ ವ್ಯಕ್ತಪಡಿಸಿದ್ದಾನೆ.








