ಕೆನಡಾ: ಕೆನಡಾದ ಸರ್ರೆಯಲ್ಲಿ ಸಿಖ್ ಮಹಿಳೆಯೋರ್ವರು ಕೊಲೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಆಕೆಯ ಪತಿಯನ್ನು ಕೆನಡಾದ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಹರ್ಪ್ರೀತ್ ಕೌರ್ (40) ಎಂದು ಗುರುತಿಸಲಾಗಿದ್ದು, ಇವರು ಬುಧವಾರ ರಾತ್ರಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಮನೆಯಲ್ಲಿ ಕೊಲೆಯಾಗಿದ್ದಾರೆ. ಇವರನ್ನು ಚಾಕುವಿನಿಂದ ಿರುದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಸಾವು ಬಹುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಮಹಿಳೆಯ ಪತಿಯನ್ನು ಚೂರಿ ಇರಿತದ ಸ್ಥಳದಲ್ಲಿ ಶಂಕಿತ ಎಂದು ಬಂಧಿಸಲಾಯಿತು. ಆದರೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕೌರ್ ಅಥವಾ ಆಕೆಯ ಸಾವಿನ ಬಗ್ಗೆ ಮಾಹಿತಿ ಇರುವ ಯಾರಾದರೂ ಮುಂದೆ ಬಂದು ಮಾಹಿತಿ ಕೆಲ ಹಾಕಲು ಸಹಾಯ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
BREAKING NEWS : ಬೀದರ್ ನಲ್ಲಿ ಘೋರ ಘಟನೆ : ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು
BREAKING NEWS: ರೋಮ್ ಕಾಫಿ ಶಾಪ್ನಲ್ಲಿ ಶೂಟ್ಔಟ್ : ಮೂವರ ಸಾವು, ಹಲವರಿಗೆ ಗಾಯ