ಹೈದ್ರಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಪರೇಡ್ ಮೈದಾನದಲ್ಲಿ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಪರೇಡ್ ಮೈದಾನದ ಬಳಿ “40% ಕಮಿಷನ್ ಸಿಎಂಗೆ ಸ್ವಾಗತ” ಬ್ಯಾನರ್ ಹಾಕುವ ಮೂಲಕ ಟಿಆರ್ಎಸ್ ಪಕ್ಷವು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿಯನ್ನು ಗುರಿಯಾಗಿಸಿಕೊಂಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುತ್ತಿದ್ದಾರೆ. ಈ ನಡುವೆ ನೆರೆಯ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಸಿಎಂ ಬಸವರಾಜ ಬೊಮ್ಮಾಯಿವರನ್ನು ವಿಭಿನ್ನವಾಗಿ ಸ್ವಾಗತ ಕೋರಿದ್ದು, “Welcome to 40% CM”. ಅಂತ ಬ್ಯಾನರ್ ಹಾಕಿ ಹಾಕಿ ಸ್ವಾಗತ ಕೋರಿದೆ.
ಸಿಕಂದರಾಬಾದ್ನ ಪರೇಡ್ ಮೈದಾನದ ಬಳಿ ಹಾಕಲಾಗಿರುವ ಬೃಹತ್ “Welcome to 40% CM”. ಎಂಬ ಬ್ಯಾನರ್ ಅನ್ನು ಹಾಕಲಾಗಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೆಲ ಸಚಿವರುಗಳು ಕಾಮಗಾರಿಗಾಗಿ ನಡೆಸಿದ ಬಿಲ್ಗಳಿಗಾಗಿ 40% ಕಮಿಷನ್ ಪಾವತಿಸುವಂತೆ ಒತ್ತಾಯಿಸುತ್ತಿದೆ ಅಂತ ಆರೋಪಿಸಿದ್ದು, ರಾಜ್ಯ ಸರ್ಕಾರದ ವಿರುದ್ದ ಗಂಭೀರ ಆರೋಪವನ್ನು ಮಾಡಿದೆ.
#TRS has put up huge banners that read: "WELCOME TO 40% CM" outside Parade Grounds in Telangana in an apparent dig at Karnataka CM.#AmitShah will be leading Centre's #LiberationDay celebration at the venue. pic.twitter.com/gPKE2m9nVs
— Gautam (@gautyou) September 17, 2022