ಉತ್ತರಾಖಂಡ: ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಗಂಗಾ ನದಿಗೆ ನಾಲ್ವರು ಯಾತ್ರಾರ್ಥಿಗಳು ಇದ್ದ ಕಾರು ಕೊಚ್ಚಿ ಹೋಗಿದೆ. ಪರಿಣಾಮ ಈ ನಾಲ್ವರು ಸಾವನ್ನಪ್ಪಿದ್ದಾರೆ ಎಂಉ ಪೊಲೀಸರು ತಿಳಿಸಿದ್ದಾರೆ.
ಇಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗಂಗಾ ನದಿ ತುಂಬಿ ಹರಿಯುತ್ತಿದೆ. ಈ ನಾಲ್ವರು ಯಾತ್ರಾರ್ಥಿಗಳು ಬುಧವಾರ ಹಿಮಾಲಯ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಕಾರು ನದಿಗೆ ಬಿದ್ದು ಕೊಚ್ಚಿ ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಕ್ಕೆ ದೌಡಾಯಿಸಿದ ಎಸ್ಡಿಆರ್ಎಫ್ ಮತ್ತು ಪೊಲೀಸರು ತಂಡವು ಶೋಧ ಕಾರ್ಯಾಚರಣೆ ನಡೆಸಿದರು.
ರಕ್ಷಣಾ ಕಾರ್ಯಗಳ ನೇತೃತ್ವ ವಹಿಸಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡವು ಹಗ್ಗಗಳ ಸಹಾಯದಿಂದ ನದಿಯ ದಡವನ್ನು ತಲುಪಲು ಕಮರಿಯನ್ನು ದಾಟಿದೆ. ಕಾರಿನ ನಂಬರ್ ಪ್ಲೇಟ್, ಕೆಲವು ಬ್ಯಾಗ್ಗಳು, ಪಂಕಜ್ ಶರ್ಮಾ (52) ಎಂಬುವರ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ಇದುವರೆಗೆ ನದಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಾ ಅವರ ಸಂಬಂಧಿಕರು ಅವರು ಗುಲ್ವೀರ್ ಜೈನ್ (40), ನಿತಿನ್ (25) ಮತ್ತು ಹರ್ಷ್ ಗುರ್ಜರ್ (19) ಅವರೊಂದಿಗೆ ಜುಲೈ 10 ರಂದು ಮೀರತ್ನಿಂದ ಕೇದಾರನಾಥಕ್ಕೆ ತೆರಳಿದ್ದರು.