ಬರೇಲಿ( ಉತ್ತರ ಪ್ರದೇಶ): ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಕೋತಿಯೊಂದು ಮೂರು ಅಂತಸ್ತಿನ ಮನೆಯ ಮೇಲ್ಛಾವಣಿಯಿಂದ ನಾಲ್ಕು ತಿಂಗಳ ಗಂಡು ಮಗುವನ್ನು ಕೆಳಗೆ ಎಸೆದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.
ಏನಿದು ಘಟನೆ?
ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ಮತ್ತು ಅವರ ಪತ್ನಿ ನಡೆದುಕೊಂಡು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದವು. ಈ ವೇಳೆ ದಂಪತಿಗಳು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ, ಅವು ಅವರನ್ನು ಸುತ್ತುವರೆದವು. ಹೀಗಾಗಿ ಅವರು ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ ಮಗು ತಂದೆ ನಿರ್ದೇಶ್ ಕೈಯಿಂದ ಕೆಳಗೆ ಬಿದ್ದಿತು. ನಿರ್ದೇಶ್ ಮಗುವನ್ನು ಎತ್ತಿಕೊಳ್ಳುವಷ್ಟರಲ್ಲಿ ಕೋತಿಯು ಮಗುವನ್ನು ಹಿಡಿದು ಛಾವಣಿಯಿಂದ ಕೆಳಗೆ ಎಸೆದಿದೆ.
ಶಿಶು ಮರಣ ಪ್ರಮಾಣ ದರ ಒಂದಂಕಿಗೆ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ: ಸಿಎಂ ಬೊಮ್ಮಯಿ
RAIN ALEART KARNATAKA: ಕರ್ನಾಟಕದಾದ್ಯಂತ ಧಾರಾಕಾರ ಮಳೆ, ಇಂದು ಕೂಡ ಭಾರಿ ಮಳೆ ಸಾಧ್ಯತೆ