ಕೆಎನ್ಎನ್ಡಿಜಿಟಲ್ ಡೆಸ್ಕ್ : ಸೊಮಾಲಿಯಾದ ಮೊಗಾದಿಶುವಿನ ಹೋಟೆಲ್ ಮೇಲೆ ಅಲ್-ಶಬಾಬ್ ಉಗ್ರರು ದಾಳಿ ನಡೆಸಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಸೋಮಾಲಿ ರಾಜಧಾನಿಯ ಸಂಸತ್ತು ದಾಳಿಯ ಪರಿಣಾಮವಾಗಿ ನಿಗದಿತ ಅಧಿವೇಶನವನ್ನು ಮುಂದೂಡಿದೆ.
ಮುತ್ತಿಗೆ ಹಾಕಲಾದ ಹೋಟೆಲ್ ವಿಲ್ಲಾ ರೋಸ್, ಪ್ರೆಸಿಡೆನ್ಶಿಯಲ್ ನಿವಾಸದ ಬಳಿ ಇದೆ. ಅಲ್ ಖೈದಾ ನಂಟು ಹೊಂದಿರುವ ಅಲ್ ಶಬಾಬ್’ನ ದಾಳಿಕೋರರು ಭಾನುವಾರ ಬಂದೂಕುಗಳು ಮತ್ತು ಸ್ಫೋಟಕಗಳನ್ನ ಬಳಸಿ ಹೋಟೆಲ್’ಗೆ ಮುತ್ತಿಗೆ ಹಾಕಿದರು. ಆ ಸಮಯದಲ್ಲಿ ಹೋಟೆಲ್’ನಲ್ಲಿದ್ದ ಕೆಲವು ಸರ್ಕಾರಿ ಅಧಿಕಾರಿಗಳು ಕಿಟಕಿಗಳ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಸೈಟ್’ನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.